Download Our App

Follow us

Home » ರಾಜಕೀಯ » 1494 ಕೋಟಿ ರೂ. ಹಣ ದುರುಪಯೋಗ ಆರೋಪ – ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು..!

1494 ಕೋಟಿ ರೂ. ಹಣ ದುರುಪಯೋಗ ಆರೋಪ – ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು..!

ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲಾಗಿದೆ.

ಜಿಲ್ಲಾ​ ಮತ್ತು ತಾಲೂಕು ಪಂಚಾಯತ್​ನಲ್ಲಿ ಬಾಕಿ ಉಳಿದಿರುವ 1494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಅರುಣ್​ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ಅರುಣ್ ಅವರು, ಅಧಿವೇಶನದಲ್ಲಿ ಜಿಪಂ,ಗ್ರಾಪಂ ಹಣ ಎಷ್ಟು ಇದೆ ಎಂದು ಕೇಳಿದ್ದೆ. 1953 ಕೋಟಿ ಇತ್ತು ಬಳಕೆ ಆಗದೆ ಹಣ ಇದೆ ಅಂತಾ ಉತ್ತರ ಕೊಟ್ಟಿದ್ದರು. ಖರ್ಚಾಗದೇ ಇದ್ದ ಹಣ ಸಂಚಿತ ನಿಧಿ ಮೂಲಕ ಸರ್ಕಾರಕ್ಕೆ ಬರಬೇಕು. ಅಲ್ಲದೆ ಆ ಹಣ ಬಳಕೆ ಆಗುವಾಗ ಶಾಸಕರ ಅನುಮತಿ ಪಡೆಯಬೇಕು. ಅದರಲ್ಲಿ 1494 ಕೋಟಿ ಖಜಾನೆಗೂ ಜಮೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ನಾನು FDಗೆ ಪತ್ರ ಬರೆದಿದ್ದೆ, ಅಲ್ಲೂ ಹಣ ಜಮೆ ಆಗಿಲ್ಲ. ಆ ಹಣ ಎಲ್ಲಿಗೆ ಹೋಯ್ತು ಅನ್ನೋದೇ ನನ್ನ ಪ್ರಶ್ನೆ. ಜಿಪಂ, ಗ್ರಾಪಂನಲ್ಲಿ ಹಿಂದುಳಿದ ವರ್ಗಗಳೇ ಜಾಸ್ತಿ ಇದ್ದಾರೆ. ಈ ಹಣದ ಬಳಕೆ ಬಗ್ಗೆ ತನಿಖೆ ಆಗ್ಬೇಕು. ಹೀಗಾಗಿ ಸಿದ್ದರಾಮಯ್ಯ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಪಬ್ಲಿಕ್ ಅಕೌಂಟ್ ಕಮಿಟಿಗೂ ದೂರು ನೀಡಿದ್ದೇನೆ ಎಂದು  ಬೆಂಗಳೂರಿನಲ್ಲಿ ಬಿಜೆಪಿ ಪರಿಷತ್ ಸದಸ್ಯ ಅರುಣ್ ತಿಳಿಸಿದ್ದಾರೆ.

ಇದನ್ನೂ ಓದಿ : ‘ಪೆನ್ ಡ್ರೈವ್’ ಚಿತ್ರದಲ್ಲಿ ‘ಕನಸಿನ‌ ರಾಣಿ’ ಮಾಲಾಶ್ರೀ – ತನಿಷಾ ಕುಪ್ಪಂಡ ಅಭಿನಯದ ಈ ಚಿತ್ರದ ಚಿತ್ರೀಕರಣ ಆರಂಭ..!

 

 

 

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ – ಕ್ಯಾಪ್ಟನ್ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು.. ಅಂಥದ್ದೇನಾಯ್ತು?

ಬಿಗ್​ಬಾಸ್ ಕನ್ನಡ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ 17 ಮಂದಿ ಕಂಟೆಸ್ಟೆಂಟ್ಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲಿ ಯಮುನಾ

Live Cricket

Add Your Heading Text Here