ಬೆಂಗಳೂರು : ಅತ್ಯಾಚಾರ, ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ. ಇದೀಗ MLA ಮುನಿರತ್ನ ವಿರುದ್ಧ ಮತ್ತೊಂದು ಮಹಾ ಹಗರಣ ಬಯಲಾಗಿದೆ.
MLA ಮುನಿರತ್ನ ಅಪೆಕ್ಸ್ ಬ್ಯಾಂಕ್ನಿಂದ ಅರ್ಜಿಯೇ ಹಾಕದೆ 20 ಕೋಟಿ ಲೋನ್ ಪಡೆದಿದ್ದಾರೆ ಎಂಬುದು ತನಿಖಾ ವೆಬ್ಸೈಟ್ www.the-file.inನಲ್ಲಿ ವರದಿಯಾಗಿದೆ. ಮುನಿರತ್ನ ನಿರ್ದೇಶಕರಾಗಿರೋ ಕಂಪನಿಯೊಂದಕ್ಕೆ ಅಪೆಕ್ಸ್ ಬ್ಯಾಂಕ್ ಅರ್ಜಿ ಹಾಕೋ ಮುನ್ನವೇ 20ಕೋಟಿ ಲೋನ್ ಸ್ಯಾಂಕ್ಷನ್ ಮಾಡಿದೆ.
ಮಾರ್ಚ್ 30, 2022 ರಂದು ನಾಮಕಾವಸ್ತೆಗೆ ಅರ್ಜಿ ಮುನಿರತ್ನ ಕಂಪನಿ ಹಾಕಿತ್ತು. ಆದರೆ ಯಾವುದೇ ದಾಖಲೆ, ರೀ-ಪೇಮೆಂಟ್ ಕೆಪ್ಯಾಸಿಟಿ ಗಮನಿಸದೆ ಮಾರ್ಚ್ 16, 2022ರ ಮೀಟಿಂಗ್ನಲ್ಲೇ ಲೋನ್ ಮಂಜೂರು ಮಾಡಿತ್ತು.
BJP ಮಾಜಿ MLA ಬೆಳ್ಳಿ ಪ್ರಕಾಶ್ ಅಧ್ಯಕ್ಷರಾಗಿದ್ದಾಗ 20 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಮುನಿರತ್ನ ಸೆಕ್ಯುರಿಟಿಯಾಗಿ ಜಾಲ ಹೋಬಳಿಯ 3 ಎಕ್ರೆ 10 ಗುಂಟೆ ಜಮೀನು ಹಾಗೂ
B ಖಾತಾ ಜಮೀನು ನೀಡಿ 20 ಕೋಟಿ ಸಾಲ ಪಡೆದಿದ್ದರು.
ಕೇವಲ ಏಳೇ ದಿನಗಳಲ್ಲಿ ಮುನಿರತ್ನ ಕಂಪನಿಗೆ 20 ಕೋಟಿ ಟ್ರಾನ್ಸ್ಫರ್ ಆಗಿದೆ. ಆದರೆ ಪಡೆದ ಸಾಲವನ್ನೂ ಬೇರೆ ಉದ್ದೇಶಗಳಿಗೆ ಮುನಿರತ್ನ ಬಳಸಿರೋದು ಪತ್ತೆಯಾಗಿದೆ. ಬ್ಯುಸಿನೆಸ್ ಡೆವಲಪ್ಮೆಂಟ್ಗೆ ಪಡೆದ ಸಾಲ ಖಾಸಗಿ ಖಾತೆಗಳಿಗೆ ಟ್ರಾನ್ಸ್ಫರ್ ಆಗಿದೆ. ಈ ಮೂಲಕ ಸಾಲ ಪಡೆದ ಎರಡೇ ತಿಂಗಳಲ್ಲಿ ಕಂಪನಿಯ ಅಕೌಂಟ್ NPA ಆಗಿದೆ. ಇದೀಗ ಲೆಕ್ಕಪರಿಶೋಧಕರ ವರದಿಯಲ್ಲಿ ಮುನಿರತ್ನ ಗೋಲ್ಮಾಲ್ ಬಯಲಾಗಿದೆ.
ಆರ್ಥಿಕ ಭದ್ರತೆ ಇಲ್ಲದಿದ್ದ ಅಪೆಕ್ಸ್ ಬ್ಯಾಂಕ್ ಕಂಪನಿಗೆ 20 ಕೋಟಿ ನೀಡಿದೆ. ಇದೀಗ ಹಿರಿಯ ಪತ್ರಕರ್ತ ಮಹಾಂತೇಶ್ ಸಂಪಾದಕತ್ವದ ದಿ ಫೈಲ್ ವರದಿ ಮುನಿರತ್ನ-ಅಪೆಕ್ಸ್ ಬ್ಯಾಂಕ್ ಹಗರಣವನ್ನು ಬಯಲಿಗೆಳೆದಿದೆ. ತನಿಖಾ ವೆಬ್ಸೈಟ್ www.the-file.inನಲ್ಲಿ ಹಗರಣ ಬಯಲಾದ ಕಾರಣ FIR ದಾಖಲಾದರೆ ಮುನಿರತ್ನ, ಬ್ಯಾಂಕ್ ಅಧ್ಯಕ್ಷ, ಬ್ಯಾಂಕ್ MD ಹಾಹೂ ಲೋನ್ ನೀಡಿದ ಎಲ್ಲಾ ಅಧಿಕಾರಿಗಳು ಜೈಲಿಗೆ ಹೋಗೋ ಸಾಧ್ಯತೆಯಿದೆ.
ಇದನ್ನೂ ಓದಿ : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ವಿಧಿವಶ..!