ಬೆಂಗಳೂರು : ಮೂಡ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸಂಕಷ್ಟ ಎದುರಿಸುತ್ತಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಇದೀಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಯಾವ ಡೌಟೂ ಇಲ್ಲ.. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಯಾರೂ ಚೀಫ್ ಮಿನಿಸ್ಟರ್ ಆಗ್ತೀನಿ ಅಂತಾ ಹೇಳಿಲ್ಲ, ಕುರ್ಚಿನೇ ಖಾಲಿ ಇಲ್ಲ, ಸಿಎಂ ಆಗ್ತೀನಿ ಅಂತಾ ಯಾಕ್ ಹೇಳ್ತಾರೆ..? ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿಶ್ವಾಸದ ಮಾತನ್ನಾಡಿ, ಎಲ್ಲರೂ ಸಿದ್ದರಾಮಯ್ಯನವ್ರೇ ಮುಂದುವರೀತಾರೆ ಅಂತಾ ಹೇಳ್ತಾರೆ. ಕುರ್ಚಿ ಖಾಲಿ ಆದ್ರೆ ತಾನೇ ಸೂಚನೆ ಕೊಡೋದು,
ಕುರ್ಚಿ ಖಾಲಿ ಆಗದೇ ಯಾಕ್ ಸೂಚನೆ ಕೊಡ್ತಾರೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿ, ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ನಾನೇ ಪ್ರಸ್ತಾಪ ಮಾಡಿದ್ದೆ. ಅಧಿವೇಶನದಲ್ಲಿ 21 ಹಗರಣಗಳ ಪಟ್ಟಿಯನ್ನೇ ಕೊಟ್ಟಿದ್ದೆ. ಈಗ ಆ ಪ್ರಕರಣಗಳ ತನಿಖೆ ಪ್ರಗತಿ ಬಗ್ಗೆ ಸಮಿತಿ ರಚಿಸಿದ್ದೇವೆ, ಪರಮೇಶ್ವರ್ ನೇತೃತ್ವದ ಸಮಿತಿ ಪರಿಶೀಲನೆ ಮಾಡುತ್ತೆ. ಬಿಜೆಪಿಯವರ ಕಾಲದಲ್ಲಿ ಸಾಕಷ್ಟು ಹಗರಣ ಆಗಿವೆ, ಎಲ್ಲಾ ಪ್ರಕರಣಗಳ ತ್ವರಿತ ತನಿಖೆ ಆಗಬೇಕು. ಈ ಕಾರಣದಿಂದಾಗಿಯೇ ಸಚಿವರ ಉಪ ಸಮಿತಿ ನಿಗಾ ಇಡಲಿದೆ, ತ್ವರಿತ ತನಿಖೆ, ಕಾನೂನು ಕ್ರಮಕ್ಕೆ ಸಲಹೆಗಳನ್ನು ನೀಡಲಿದೆ, ತಪ್ಪು ಮಾಡಿದೋರಿಗೆ ಶಿಕ್ಷೆ ಆಗಬೇಕಲ್ಲವೇ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಪೊಲೀಸ್ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿ ಟೆಕ್ಕಿಗೆ ವಂಚನೆ..!