ಭಾರಿ ಮಳೆಯಿಂದ ನಲುಗಿದ ತೆಲುಗು ರಾಜ್ಯಗಳ ವಿವಿಧ ಪ್ರದೇಶದ ಜನರ ನೆರವಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂದಿದ್ದು, ಎರಡೂ ರಾಜ್ಯಗಳ ನೆರೆ ಪೀಡಿತರಿಗಾಗಿ 1 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಜನ ಸಂಕಷ್ಟದಲ್ಲಿದ್ದಾಗ ಈ ಹಿಂದೆಯೂ ಅಲ್ಲು ಅರ್ಜುನ್ ಜನರ ಸಹಾಯಕ್ಕೆ ನಿಂತಿದ್ದರು. ಈಗ ಅದು ಮತ್ತೆ ಮುಂದುವರೆದಿದೆ. ಜನರನ್ನು ರಂಜಿಸುವುದು ಮಾತ್ರವಲ್ಲ ಜನರ ಸಂಕಷ್ಟಕ್ಕೂ ಮಿಡಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಈ ಮೂಲಕ ಅಲ್ಲು ಅರ್ಜುನ್ ತೋರಿಸಿಕೊಟ್ಟಿದ್ದಾರೆ.
ʼಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಕೆಲ ಪ್ರದೇಶದ ಜನ ಜನ ಮಳೆಯಿಂದಾಗಿ ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ನನ್ನ ಮನಸ್ಸಿಗೆ ತೀರ್ವ ನೋವುಂಟು ಮಾಡಿದೆ. ಅವರ ಕಷ್ಟಕ್ಕೆ ನನ್ನ ಕಡೆಯಿಂದ ತಲಾ 1 ಕೋಟಿ ರೂಪಾಯಿಗಳನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೆನೆ. ಆದಷ್ಟು ಬೇಗ ಎಲ್ಲರೂ ಸಂಕಷ್ಟದಿಂದ ಪಾರಾಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆʼಎಂದು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
Post Views: 12