ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ‘ಪುಷ್ಪ 2’. ಈಗಾಗಲೇ ಗ್ಲಿಂಪ್ಸ್ಗಳ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರೋ ಈ ಸಿನಿಮಾ, ಇದೇ ಡಿಸೆಂಬರ್ 5ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತೆ. ಈಗಾಗಲೇ ಭರ್ಜರಿ ಪ್ರಮೋಷನ್ ಸಹ ನಡ್ತಿದೆ. ಮುಂಬೈ, ಕೊಚ್ಚಿ, ಪಾಟ್ನಾ ಚೆನ್ನೈ, ಹೈದ್ರಾಬಾದ್ನಲ್ಲಿ ಪ್ರಮೋಷನ್ ಮಾಡಿರೋ ಚಿತ್ರತಂಡ ಕರ್ನಾಟಕವನ್ನ ಕೇರ್ ಮಾಡಿಲ್ಲ. ಕರ್ನಾಟಕದಲ್ಲಿ ನಡೆಯಬೇಕಿದ್ದ ಪ್ರೀ- ರಿಲೀಸ್ ಇವೆಂಟ್ ಕೂಡ ಕ್ಯಾನ್ಸಲ್ ಆಗಿದೆ.
ನವೆಂಬರ್ 30ಕ್ಕೆ ಬೆಂಗಳೂರನಲ್ಲಿ ‘ಪುಷ್ಪ 2’ ಪ್ರೀ-ರಿಲೀಸ್ ಈವೆಂಟ್ ಹಾಗೂ ಸುದ್ದಿಗೋಷ್ಠಿ ನಡೆಯಬೇಕಿತ್ತು. ಆದ್ರೆ ಚಿತ್ರತಂಡ ಅದ್ನ ಕ್ಯಾನ್ಸಲ್ ಮಾಡಿದೆ. ಹೇಳಿಕೇಳಿ ಅಲ್ಲು ಅರ್ಜುನ್ಗೆ ಕರ್ನಾಟಕ ಅಂದ್ರೆ, ಕನ್ನಡ ಅಂದ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ತರ. ಕರ್ನಾಟಕ ಮಂದಿಯನ್ನ, ಕನ್ನಡದವರನ್ನ ಕಡೆಗಣಿಸುತ್ತಾರೆ ಅಲ್ಲು ಅರ್ಜುನ್.
ಬೆಂಗಳೂರಲ್ಲಿ ‘ಪುಷ್ಪ 2’ ಸುದ್ದಿಗೋಷ್ಠಿ ಆಗಬೇಕಿತ್ತು. ಆದ್ರೆ ಪ್ಲ್ಯಾನ್ ಮಾಡಿ ರದ್ದು ಮಾಡಿದ ಅಲ್ಲು ಅರ್ಜುನ್. ಇನ್ನು ಬೆಂಗಳೂರಿನಲ್ಲಿ ಫಂಕ್ಷನ್ ಮೊದಲೇ ನಿಗದಿಯಾಗಿತ್ತು. ಅದಕ್ಕೆ ಅಂತಲೇ ಸ್ಪೆಷಲ್ ಅನೌನ್ಸ್ ಮೆಂಟ್ ಟೀಸರ್ ಕೂಡ ಲಾಂಚ್ ಮಾಡಿದ್ದರು ಪುಷ್ಪ ಟೀಂ. ಕೊನೆಯ ಕ್ಷಣದಲ್ಲಿ ಬೆಂಗಳೂರಿಗೆ ಬಾರದಿರಲು ನಿರ್ಧಾರ ಮಾಡಿದ್ದಾರೆ. ಈ ವಿಷಯ ಕೇಳಿರೋ ಕರ್ನಾಟಕದ ಪಿಆರ್ವ್ಸೊ, ಚಿತ್ರತಂಡವನ್ನ ಸಂರ್ಪಕ ಮಾಡಿದೆ.. ಆದ್ರೆ ಅವರು ಹೇಳ್ತೀರೋದು ಒಂದೇ ಮಾತು, ನಮ್ಮ ಹೀರೋ ಅಲ್ಲು ಅರ್ಜುನ್ಗೆ ಬೆಂಗಳೂರಿಗೆ ಬರೋದಕ್ಕೆ ಇಷ್ಟ ಇಲ್ವಂತೆ ಅಂತ. ಹಾಗಾದ್ರೆ ಅಲ್ಲು ಅರ್ಜುನ್ಗೆ ಕನ್ನಡದವರು ಇಷ್ಟ ಇಲ್ವಾ..?
ಅಲ್ಲು ಅರ್ಜುನ್ಗೆ ಕನ್ನಡ ವರ್ಷನ್ನಲ್ಲಿ ಪುಷ್ಪ 2 ರಿಲೀಸ್ ಆಗಬೇಕು. ಈ ಸಿನಿಮಾವನ್ನ ಕನ್ನಡದವರು ನೋಡಬೇಕು. ಇದ್ರಿಂದ ಅವರಿಗೆ ಪ್ರಾಫಿಟ್ ಆಗಬೇಕು. ಆದ್ರೆ ಕರ್ನಾಟಕದವರು, ಕನ್ನಡಿಗರು ಅಂದ್ರೆ ಇಷ್ಟವಿಲ್ಲ. ಬೆಂಗಳೂರಲ್ಲಿ ಬಂದು ಕನ್ನಡವರ ಜೊತೆ ಸಿನಿಮಾ ಪ್ರಚಾರ ಮಾಡುವುದಕ್ಕೆ ಇವರಿಗೆ ಅಸಡ್ಡೆ. ಈ ಚೆಂದಕ್ಕೆ ನೀವು ಯಾಕೆ ‘ಪುಷ್ಪ 2’ ಸಿನಿಮಾವನ್ನ ನೋಡಬೇಕು..? ಈ ಸಿನಿಮಾ ನೋಡೋ ಬದಲು ನಮ್ ಕನ್ನಡ ಸಿನಿಮಾವನ್ನ ನೋಡಿ ಬೆಳಸಿ.
‘ಪುಷ್ಪ 2’ ಸಿನಿಮಾದಲ್ಲಿ ಕನ್ನಡದ ರಶ್ಮಿಕಾ, ಶ್ರೀಲೀಲಾ, ಡಾಲಿ ನಟಿಸಿದ್ರೂ ಕರ್ನಾಟಕದ ಮೇಲೆ ತಾತ್ಸಾರ ಎದ್ದುಕಾಣುತ್ತಿದೆ. ನಟ ಯಶ್ ಸ್ಟೈಲ್ ಅಷ್ಟೇ ಅಲ್ಲ, ಸ್ಪೀಚ್ ಕೂಡ ಕಾಪಿ ಮಾಡಿದ್ದರು ಅಲ್ಲು ಅರ್ಜುನ್. ಯಶ್ ಸ್ಟೈಲ್ ಕಾಪಿ ಮಾಡಿ, ಕಾಪಿಕ್ಯಾಟ್ ಎನಿಸಿಕೊಂಡಿದ್ದರು ಈ ವೈಲ್ಡ್ ಫೈಯರ್. ಯಾವುದೇ ಭಾಷೆ ಪ್ರಮೋಷನ್ಗೆ ಹೋದ್ರು ಅಲ್ಲಿ ಇವರ ಮೂಲ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಬೇರೆ ಭಾಷೆಯವರನ್ನ ಹೀಯಾಳಿಸುತ್ತಾರೆ.
ಈ ಅಲ್ಲು ಅರ್ಜುನ್ಗೆ ನಮ್ ಕರ್ನಾಟಕದ ಥಿಯೇಟರ್ಸ್ ಹಾಗೂ ಮಲ್ಟಿಪ್ಲೆಕ್ಸ್ಗಳು ಬೇಕು. ಆದ್ರೆ ಕನ್ನಡದಲ್ಲಿ ಪ್ರಚಾರ ಮಾಡುವುದಕ್ಕೆ ಆಗಲ್ಲ. ಕರ್ನಾಟಕದಲ್ಲಿ ‘ಪುಷ್ಪ 2’ ಒಂದು ಟಿಕೆಟ್ನ ಬೆಲೆ 600 ರಿಂದ ಸಾವಿರ ರೂಪಾಯಿ. ಇಷ್ಟೊಂದು ದುಡ್ಡು ಖರ್ಚ್ ಮಾಡಿ ‘ಪುಷ್ಪ 2’ ಸಿನಿಮಾನಾ ನೀವು ನೋಡಬೇಕಾ..? ಕನ್ನಡ ಕಂಡ್ರೆ ಅಸಹ್ಯ ಮಾಡುವವರ ಸಿನಿಮಾನಾ ನೀವು ನೋಡಬೇಕಾ..?
ಕನ್ನಡಿಗರೇ.. ನಮ್ಮನ್ನ ಇಷ್ಟೊಂದು ನಿರ್ಲಕ್ಷ್ಯ ಮಾಡ್ತಿರೋ ಈ ದುರಂಹಕಾರಿ ಅಲ್ಲು ಅರ್ಜುನ್ ಸಿನಿಮಾವನ್ನ ಯಾಕೆ ಪ್ರೋತ್ಸಾಹಿಸುತ್ತೀರಾ..? ಅಲ್ಲು ಅರ್ಜುನ್ ಅಹಂಕಾರಕ್ಕೆ ಬ್ರೇಕ್ ಹಾಕಬೇಕು ಅಂದ್ರೆ ನೀವು ‘ಪುಷ್ಪ 2’ ಸಿನಿಮಾವನ್ನ ನೋಡದೇ, ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು. ಪರಭಾಷಿಗರ ಹಾವಳಿ, ಅಲ್ಲು ಅರ್ಜುನ್ ಸೊಕ್ಕು ಮುರಿಯಬೇಕು.
ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿ.20ಕ್ಕೆ ರಿಲೀಸ್..!