ಬೆಂಗಳೂರು : ಐಶ್ವರ್ಯ ಗೌಡ ಗೋಲ್ಡ್ ವಂಚನೆ ಕೇಸ್ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಂಟಕ ಎದುರಾಗಿದೆ. ಐಶ್ವರ್ಯಾ, ಕುಲಕರ್ಣಿ ಮಧ್ಯೆ ವ್ಯವಹಾರಕ್ಕೆ ಸಾಕ್ಷಿಯಾಗಿದ್ದ ಕಾರ್ನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಹಿಂದೆ ಐಶ್ವರ್ಯಗೌಡ ಬಳಿ ಮೂರು ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಆಡಿ, ಬಿಎಂಡಬ್ಲ್ಯೂ ಹಾಗೂ ಫಾರ್ಚುನರ್ ಕಾರುಗಳನ್ನು ಸೀಜ್ ಮಾಡಲಾಗಿತ್ತು. ಇದೀಗ ಮತ್ತೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
KA 03 NN8181 ನಂಬರಿನ ಸುಮಾರು 60 ಲಕ್ಷ ಮೌಲ್ಯದ C220D ಮರ್ಸಿಡಿಸ್ ಬೆಂಜ್ ಕಾರನ್ನು ಸೀಜ್ ಮಾಡಲಾಗಿದೆ. ವಂಚನೆ ಮಾಡಿದ್ದ ಹಣದಿಂದ ಕಾರು ಖರೀದಿಸಿದ್ದ ಐಶ್ವರ್ಯ ಗೌಡ, ಅದನ್ನು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಗಿಫ್ಟ್ ನೀಡಿದ್ದಳು. ಇದೀಗ ವಿನಯ್ ಕುಲಕರ್ಣಿ ಬಳಿಯಿಂದ ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಮಹಾ ಜಗದ್ಗುರು ಭಾರತೀ ತೀರ್ಥ ಶ್ರೀಗಳ ಸನ್ಯಾಸತ್ವಕ್ಕೆ 50 ವರ್ಷ.. ಶಕ್ತಿ ಪೀಠ ಶೃಂಗೇರಿಯಲ್ಲಿ ಸ್ತೋತ್ರ ತ್ರಿವೇಣಿ ಕಾರ್ಯಕ್ರಮ..!