ಭೂಮಿಯಿಂದ ಸೂರ್ಯನತ್ತ ಈಗಾಗಲೇ ನಾಲ್ಕು ತಿಂಗಳ ಅವಧಿಯಲ್ಲಿ 15 ಲಕ್ಷ ಕಿ.ಮೀ.ಗಳನ್ನು ಕ್ರಮಿಸಿರುವ ಆದಿತ್ಯ-L-1 ಇಂದು ಕಕ್ಷೆಗೆ ಸೇರಲಿದೆ. ಇತಿಹಾಸ ಬರೆಯಲು ಇಸ್ರೋ ಸಜ್ಜಾಗಿದೆ.
ಆದಿತ್ಯ-L-1 ನೌಕೆಯನ್ನು ಇಂದು ಸಂಜೆ 4 ಗಂಟೆಯ ವೇಳೆಗೆ ಲ್ಯಾಂಗ್ರೇಜ್ ಪಾಯಿಂಟ್ (ಎಲ್1)ನಲ್ಲಿ ಇಸ್ರೋ ಕೂರಿಸಲಿದೆ. ಇದು ಸೂರ್ಯಯಾನ ನೌಕೆಯ ಅಂತಿಮ ನಿಲ್ದಾಣವಾಗಿದ್ದು, ಅಲ್ಲಿಂದಲೇ ಗ್ರಹಣ ಸೇರಿ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ.
ಆದಿತ್ಯ ನೌಕೆಯಲ್ಲಿ 4 ಪೇಲೋಡ್‌ಗಳಿವೆ. ಅವು ಸೂರ್ಯನನ್ನು ಅಧ್ಯಯನ ಮಾಡಿ ಇಸ್ರೋಗೆ ಮಾಹಿತಿ ರವಾನಿಸಲಿವೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಸೆ.2ರಂದು ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಅದು ನಾಲ್ಕು ತಿಂಗಳ ಕಾಲ ಸುಮಾರು 15 ಲಕ್ಷ ಕಿ.ಮೀ. ಸಂಚರಿಸಿ ತನ್ನ ಅಂತಿಮ ಗುರಿಯನ್ನು ಸಮೀಪಿಸಿದೆ. ಅದನ್ನೀಗ ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶದಲ್ಲಿ ಕೂರಿಸಲಾಗುತ್ತದೆ. ಈ ಅವಕಾಶ ಕೈಬಿಟ್ಟರೆ ಅದು ಸೂರ್ಯನತ್ತ ಪ್ರಯಾಣ ಮುಂದುವರೆಸಿ ವ್ಯರ್ಥವಾಗುವ ಅಪಾಯವಿದೆ. ಹೀಗಾಗಿ ಶನಿವಾರದ ಕಾರ್ಯಾಚರಣೆ ಇಸ್ರೋಗೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ : ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 4 ಬಲಿ..