Download Our App

Follow us

Home » ರಾಜಕೀಯ » ನಾನೀಗ ಮಾತನಾಡೋ ಸ್ಥಿತಿಯಲ್ಲಿಲ್ಲ.. ಎಸ್‌ಎಂ ಕೃಷ್ಣ ಅಂತಿಮ ದರ್ಶನಕ್ಕೆ ಕಣ್ಣೀರಿಡುತ್ತಾ ಬಂದ ನಟಿ ರಮ್ಯಾ..

ನಾನೀಗ ಮಾತನಾಡೋ ಸ್ಥಿತಿಯಲ್ಲಿಲ್ಲ.. ಎಸ್‌ಎಂ ಕೃಷ್ಣ ಅಂತಿಮ ದರ್ಶನಕ್ಕೆ ಕಣ್ಣೀರಿಡುತ್ತಾ ಬಂದ ನಟಿ ರಮ್ಯಾ..

ಬೆಂಗಳೂರು : ಕರ್ನಾಟಕದ ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಡರಾತ್ರಿ ಸದಾಶಿವನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಅವರು ಆಗಮಿಸಿದ್ದು, ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಕಣ್ಣೀರು ಹಾಕಿದ್ದಾರೆ. ದುಃಖದಲ್ಲೇ ಸದಾಶಿವನಗರದ ನಿವಾಸಕ್ಕೆ ಬಂದ ರಮ್ಯಾ ಅವರು, ಎಸ್​.ಎಂ ಕೃಷ್ಣರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಎಸ್​.ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಅವರು ಬರುವಾಗ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಏನನ್ನು ಉತ್ತರಿಸಲಿಲ್ಲ. ನಾನೀಗ ಮಾತನಾಡೋ ಸ್ಥಿತಿಯಲ್ಲಿಲ್ಲ. ಪ್ಲೀಸ್ ನನಗೆ ಹೋಗೋಕೆ ದಾರಿ ಬಿಡಿ. ಏನೂ ಹೇಳುವುದಕ್ಕೆ ಆಗಲ್ಲ ಎಂದು ಹೇಳಿ ಬೇಸರದಿಂದಲೇ ತೆರಳಿದ್ದಾರೆ.

ರಮ್ಯಾ ಅವರನ್ನು ರಾಜಕಾರಣಕ್ಕೆ ಕರೆತಂದಿದ್ದೆ ಎಸ್‌ಎಂಕೆ. ಈ ಕಾರಣದಿಂದ ಹಲವಾರು ಬಾರಿ ರಮ್ಯಾ ಅವರು ಎಸ್‌ಎಂಕೆ ನಿವಾಸಕ್ಕೆ ತೆರಳಿ ಮಾತನಾಡಿ ಸಲಹೆಗಳನ್ನು ಪಡೆಯುತ್ತಿದ್ದರು. ಎಸ್‌.ಎಂ.ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟ ರಮ್ಯಾ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ತಮ್ಮ ಸೆಲೆಬ್ರಿಟಿ ಇಮೇಜ್‌ನಿಂದಾಗಿ ಹೈಕಮಾಂಡ್‌ನಲ್ಲಿ ಶೀಘ್ರವಾಗಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿ ಹೈಕಮಾಂಡ್‌ನ ಪ್ರಭಾವಶಾಲಿ ನಾಯಕರ ಜೊತೆ ನೇರವಾಗಿ ಸಂಪರ್ಕ ಸಾಧಿಸಬಲ್ಲ ರಾಜ್ಯದ ಕೆಲವೇ ಕಾಂಗ್ರೆಸ್ಸಿಗರಲ್ಲಿ ರಮ್ಯಾ ಕೂಡ ಒಬ್ಬರಾಗಿದ್ದರು. ಕೃಷ್ಣ ಅವರನ್ನು ಅಂಕಲ್‌ ಎಂದೇ ಕರೆಯುತ್ತಿದ್ದ ರಮ್ಯಾ, ಕೃಷ್ಣ ಅವರ ಮಾರ್ಗದರ್ಶನದಲ್ಲೇ ರಾಜಕೀಯ ನಡೆಗಳನ್ನು ಇಟ್ಟವರು. ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ನ ಒಳ ರಾಜಕಾರಣವನ್ನು ಭೇದಿಸಿ ಸಂಸದರಾಗಲು ಈ ಮಾರ್ಗದರ್ಶನವೇ ಅವರಿಗೆ ರಕ್ಷೆಯಾಗಿತ್ತು.

ಇದನ್ನೂ ಓದಿ : ದೇಶ ಕಂಡ ಮೇರು ನಾಯಕ, ಅವರೊಂದಿಗಿನ ಒಡನಾಟ ಅವಿಸ್ಮರಣೀಯ – ಎಸ್ಎಂ ಕೃಷ್ಣ​ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ..!

Leave a Comment

DG Ad

RELATED LATEST NEWS

Top Headlines

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಸಿನಿಮಾದ 2ನೇ ಹಾಡು ರಿಲೀಸ್ – ಚಿತ್ರತಂಡಕ್ಕೆ ಗೋವಾ ಸಿಎಂ ಸಾಥ್..!

“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಲನಚಿತ್ರದ ಎರಡನೇ ಮರಾಠಿ ಲಿರಿಕಲ್‌ ವಿಡಿಯೋ ಜನವರಿ 14ರಂದು ಗೋವಾ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಡುಗಡೆಯಾಗಿದೆ. ಗೋವಾದ ಸಿಎಂ ಪ್ರಮೋದ ಸಾವಂತ್

Live Cricket

Add Your Heading Text Here