ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಭಕ್ಕೆ ಇನ್ನು ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಬೆನ್ನಲ್ಲೇ ಬಿರುಸಿನಿಂದ ಸಿದ್ಧತೆಗಳು ಆರಂಭ ಆಗಿವೆ. ಈಗಾಗಲೇ ಬಿಗ್‌ಬಾಸ್ ಕನ್ನಡ 11ರ ಪ್ರೋಮೊ ರಿಲೀಸ್ ಆಗಿದ್ದು, ಈ ಮಧ್ಯೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡದ ಮುಖ್ಯಸ್ಥರು ಈ ಬಾರಿಯ ಶೋ ಬಗ್ಗೆ ಮಾಹಿತಿ ನೀಡಿದ್ದರು.
ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11ರನ್ನು ಸ್ಪಾನ್ಸರ್ ಮಾಡಿರುವ ಕಂಪನಿಗಳಲ್ಲಿ ಎ23 ಕೂಡ ಸೇರಿದೆ. ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಇದೇ ರಮ್ಮಿ ವಿಚಾರವಾಗಿ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಈಗ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪಾನ್ಸರ್‌ಗಳಲ್ಲಿ ಎ23 ರಮ್ಮಿ ಕೂಡ ಒಂದಾಗಿರುವುದರಿಂದ ಸುದ್ದಿಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ಎತ್ತಲಾಗಿತ್ತು. ಸ್ಪೆಷಲ್ ಪಾರ್ಟನರ್‌ನಲ್ಲಿ ಎ23 ರಮ್ಮಿ ಅಂತ ಇದೆ. ಸುದೀಪ್ ಪ್ರೋಗ್ರಾಂಗೆ ಇಂತಹದ್ದೊಂದು ಸ್ಪೆಷಲ್ ಪಾರ್ಟನರ್ ಬೇಕಿತ್ತಾ ಅಂತ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಗರಂ ಆಗಿ ಉತ್ತರ ಕೊಟ್ಟಿದ್ದಾರೆ.
ರಮ್ಮಿ ಜೊತೆ ಬ್ಯುಸಿಸೆನ್ ಪಾರ್ಟನರ್ ಆಗಿರುವುದು ಯಾಕೆ? ಎಂದು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟ ಕಿಚ್ಚ ಸುದೀಪ್ ಅವರು, ಹೆಚ್ಚು ತಿಳುವಳಿಕೆ ಇರುವಂತ ಸಮಾಜ ನಮ್ಮದು. ಬುದ್ಧಿವಂತಿಕೆ ಇರುವ ಸಮಾಜ ಇದು. ಇಲ್ಲಿ ಸಿಗರೇಟ್ ಇದೆ. ಕುಡಿತ ಸಾಕಷ್ಟಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ ತಾಯಿ ಇದ್ದಾರೆ. ನಮಗೆ ಏನು ಬೇಕು ನಾವು ಏನು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ತುಂಬಾ ಟ್ಯಾಕ್ಸ್ ತೆಗೆದುಕೊಳ್ಳುತ್ತಿದ್ದಾರೆ ತುಂಬಾ ದುಡ್ಡು ವಸೂಲಿ ಮಾಡುತ್ತಿದ್ದಾರೆ ಅನಿಸುತ್ತದೆ.
ಆದರೆ ದೇಶ ನಡೆಸುವುದಕ್ಕೆ ಸರ್ಕಾರ ಏನು ಮಾಡಬೇಕು ಅದನ್ನು ಮಾಡಲೇ ಬೇಕು. ಈ ರೀತಿ ದೊಡ್ಡ ಶೋ ನಡೆಸುವುದಕ್ಕೆ ಬಿಗ್ ಬಾಸ್ ತಂಡದವರು ಕೂಡ ಅವರ ಕೆಲಸ ಮಾಡಬೇಕು. ಏಕೆಂದರೆ ಒಂದು ದೊಡ್ಡ ಶೋ ಮಾಡಲು ಅಷ್ಟೇ ಖರ್ಚಾಗುತ್ತದೆ ಎಂದು ಹೇಳಿದರು.
ಬಿಗ್ ಬಾಸ್ ಕಾರ್ಯಕ್ರಮದಿಂದ ಎಷ್ಟು ಮನೆಗಳು ಉದ್ದಾರ ಆಯ್ತು. ಎಷ್ಟು ವ್ಯಕ್ತಿತ್ವಗಳು ಉದ್ದಾರ ಆಯ್ತು.. ಎಷ್ಟು ಜನರಿಗೆ ಕೆಲಸ ಸಿಗ್ತು.. ಇಲ್ಲಿ ಕೆಲಸ ಗಿಟ್ಟಿಸಿಕೊಂಡವರು A23 ರಮ್ಮಿಯನ್ನು ಆಯ್ಕೆ ಮಾಡಿಕೊಂಡ್ರಾ.. ಇಲ್ಲ ಏನು ಕೆಲಸ ಮಾಡಿದ್ದರು ಅದರಿಂದ ಏನು ಕಲಿತರು ಹೀಗೆ ನಾನು ದೊಡ್ಡದಾಗಿ ಯೋಚನೆ ಮಾಡಲು ಇಷ್ಟ ಪಡುತ್ತೀನಿ.
ನನ್ನ ಪ್ರಕಾರ ಸಮಾಜದಲ್ಲಿ ಇರುವ ಪ್ರತಿಯೊಬ್ಬರು ತಿಳುವಳಿಕೆ ಇರುವವರು ಸರಿಯಾಗಿರುವ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ನಮಗೆ ಒಂದು ಕುಟುಂಬ, ಒಬ್ಬಳೆ ಹೆಂಡತಿ ಮತ್ತು ಒಬ್ಬರೆ ತಂದೆ ತಾಯಿ ಇದ್ದಾರೆ. ನಿಮಗೆ ತಕರಾರು ಇದ್ದರೆ ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ’ ಎಂದು ಸುದೀಪ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ – ವಿಶೇಷ ಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮುಂದೂಡಿಕೆ..!