ಗುರುನಂದನ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಫಸ್ಟ್ ರ್‍ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಮತ್ತು ಮಿಸ್ಸಿಂಗ್ ಬಾಯ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಗುರುನಂದನ್ ಇದೀಗ ಮಂಡಿಮನೆ ಟಾಕೀಸ್ ಬ್ಯಾನರ್ ಮೂಲಕ ನಿರ್ಮಾಪಕರೂ ಆಗಿದ್ದಾರೆ.
ಗುರುನಂದನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹೊಸ ಚಿತ್ರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾ ಸೆಟ್ಟೇರಿತು. ಈ ಚಿತ್ರಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡೋ ಮೂಲಕ ಚಾಲನೆ ನೀಡಿದ್ದಾರೆ. ಈ ಸಿನಿಮಾಗೆ ಸಿ.ಎಂ ವಿಶೇಷ ಅಧಿಕಾರಿ ಶ್ರೀವೆಂಕಟೇಶ್ ಹಾಗೂ ಗೋಲ್ಡ್ ಪಿಂಚ್ ಹೋಟೇಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಶುಭ ಹಾರೈಸಿದ್ದಾರೆ.
ಸುಮಂತ್ ಗೌಡ ಚೊಚ್ಚಲ ನಿರ್ದೇಶನ ಚಿತ್ರಕ್ಕಿದ್ದು, ಭೀಮ ಕ್ಯಾಮೆರಾ ಮ್ಯಾನ್ ಶಿವಸೇನಾ ಫಸ್ಟ್ ರಾಂಕ್ ರಾಜು ಖ್ಯಾತಿಯ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸ್ತಿದ್ದಾರೆ. ಶರತ್ ಚಕ್ರವರ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಮುಖ್ಯಭೂಮಿಕೆಯಲ್ಲಿ ಗುರುನಂದನ್ ಜೊತೆಗೆ ನಾಯಕಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೊಣ್ಣಚ್ಚ ನಾಯಕಿಯಾಗಿ ಅಭಿನಯಿಸ್ತಿದ್ದಾರೆ. ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಇನ್ನು ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ ಚಿತ್ರತಂಡ ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದೆ. ಇದರೊಂದಿಗೆ ಮುಹೂರ್ತದಿಂದಲೇ ಚಿತ್ರೀಕರಣ ಶುರುಮಾಡಿದೆ.
ಇದನ್ನೂ ಓದಿ : ಹೆಬ್ಬಾಳ ಫ್ಲೈಓವರ್ನಲ್ಲಿ BMTC ವೋಲ್ವೋ ಬಸ್ನಿಂದ ಸರಣಿ ಅಪಘಾತ – ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ..!