ಸ್ಯಾಂಡಲ್ವುಡ್ ಶೋಕ್ದಾರ್ ಧನ್ವೀರ್ ಗೌಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸಿನಿ ದುನಿಯಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.. ಸಿಂಪಲ್ ಸುನಿ ನಿರ್ದೇಶನದ `ಬಜಾರ್’ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಮೋಡಿ ಮಾಡಿ, ತನ್ನದೇ ಕ್ರೇಜ್ ಸೃಷ್ಟಿಸಿದ್ರು. ನಂತರ ಬೈಟು ಲವ್, ಕೈವ ವಾಮನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸಿನಿರಸಿಕರ ಮನ ಗೆದಿದ್ದಾರೆ. ಸದ್ಯ ಹಯಗ್ರೀವ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಯಲ್ಲಿ ದರ್ಬಾರ್ ನಡೆಸೋಕೆ ರೆಡಿಯಾಗಿದ್ದಾರೆ..
ಮಾಸ್ ಡೈಲಾಗ್ , ಖದರ್ ಲುಕ್ ಮೂಲಕ ತನ್ನದೇ ಅಭಿಮಾನಿಗಳ ಬಳಗ ಹೊಂದಿರೋ ಧನ್ವೀರ್ , ಈ ಬಾರಿ ಗ್ರ್ಯಾಂಡ್ ಬರ್ತ್ಡೇ ಗೆ ಬ್ರೇಕ್ ಹಾಕಿದ್ದಾರೆ.. ಇಷ್ಟು ವರ್ಷ ಫ್ಯಾನ್ಸ್ ಜೊತೆ ಬರ್ತ್ಡೇ ಸೆಲಬ್ರೇಟ್ ಮಾಡಿಕೊಳ್ತಿದ್ದ ಧನು, ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ..
ಹೌದು, ದರ್ಶನ್ ಹಾಗೂ ಧನ್ವೀರ್ ನಡುವೆ ಗುರು ಶಿಷ್ಯರ ಬಾಂಧವ್ಯ ಇದೆ. ಧನ್ವೀರ್ಗೆ ದರ್ಶನ್ ದೊಡ್ಡಣ್ಣ ಇದ್ಹಾಗೆ. ಇದೀಗ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಹೀಗಾಗಿ ಡಿ ಬಾಸ್ ದರ್ಶನ್ ಜೈಲಿನಿಂದ ಹೊರ ಬರುವ ವರೆಗೆ ನಾನು ಬರ್ತ್ಡೇ ಆಚರಣೆ ಮಾಡೋಲ್ಲ! ಅಭಿಮಾನಿಗಳು ಯಾರೂ ನನ್ನ ಮನೆ ಹತ್ತಿರ ಬರಬೇಡಿ ಅಂತ ತಮ್ಮ ಅಭಿಮಾನಿಗಳಿಗಳಿಗೆ ನಟ ಧನ್ವೀರ್ ಪತ್ರ ಬರೆಯುವ ಮೂಲಕ ಹೇಳಿಕೊಂಡಿದ್ದಾರೆ.
ಈ ಮನವಿ ಪತ್ರವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರೇ ನಟ ಧನ್ವೀರ್..
ನನ್ನ ಆತ್ಮೀಯ ಅಭಿಮಾನಿಗಳೇ, ಸೆಪ್ಟೆಂಬರ್ 8 ರಂದು ನನ್ನ ಹುಟ್ಟು ಹಬ್ಬ ಇರುವುದರಿಂದ ನಿಮ್ಮ ಸಂಭ್ರಮಾಚರಣೆಯಲ್ಲಿ ನಾನು ಭಾಗಿಯಾಗಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಕ್ಷಮೆ ಇರಲಿ. ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಹರೈಸಿ, ಆಶೀರ್ವದಿಸಬೇಕಾಗಿ ಪ್ರೀತಿಯಿಂದ ವಿನಂತಿಸಿಕೊಳ್ಳುತ್ತೇನೆ. ಮುಂದಿನ ವರ್ಷ ಖಂಡಿತವಾಗಿಯೂ ನಿಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಎನಿವೇ ಈ ವರ್ಷ ಅದ್ದೂರಿ ಬರ್ತ್ಡೇ ಗೆ ಬ್ರೇಕ್ ಹಾಕಿರೋ ಧನ್ವೀರ್, ಮುಂದಿನ ವರ್ಷವಾದ್ರು ಅಭಿಮಾನಿಗಳ ಜೊತೆ ಸೆಲಬ್ರೇಟ್ ಮಾಡ್ತಾರ ಅಂತ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ನನಸಾಯಿತು ಎತ್ತಿನಹೊಳೆ ಕನಸು – ಮೊದಲ ಹಂತದ ಯೋಜನೆಗೆ ಸಿಎಂ ಸಿದ್ದು ಚಾಲನೆ..!