ಹಾವೇರಿ : ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ಕಣ್ಣುಗುಡ್ಡೆಯೇ ಕಿತ್ತು ಹೋಗಿರುವ ಮಾಹಿತಿ ಲಭ್ಯವಾಗಿದೆ.
ಅನೇಕರಿಗೆ ಕೊಬ್ಬರಿ ಹೋರಿಗಳ ತಿವಿತದಿಂದ ಎದೆ ಭಾಗ, ಕೈ, ಕಾಲು ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನವರನ್ನು ಹಾವೇರಿಯ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಸ್ಪರ್ಧೆಯಲ್ಲಿ ಮೋಟಾರ್ ಸೈಕಲ್ ಸೇರಿದಂತೆ ಚಿನ್ನ ಮತ್ತು ಇತರ ವಸ್ತುಗಳನ್ನ ಬಹುಮಾನವಾಗಿ ಇಡಲಾಗಿತ್ತು. ಜನರು ಅತ್ಯಂತ ಹುರುಪಿನಿಂದ ಎತ್ತುಗಳನ್ನು ಓಡಿಸಿ ಖುಷಿಪಟ್ಟರು. ಹೋರಿ ಬೆದರಿಸೋ ಸ್ಪರ್ಧೆ ಕೆಲವರಿಗೆ ಮನರಂಜನೆ ನೀಡಿದರೆ, ಕೆಲವರನ್ನ ಸಂಕಷ್ಟಕ್ಕೆ ದೂಡಿದೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ದರ್ಶನ್ಗೆ ಹೆಚ್ಚಾಗ್ತಲೆ ಇದೆ ಟೆನ್ಷನ್.. ಬೇಲ್ ಕ್ಯಾನ್ಸಲ್ಗೆ ಇಂದು ಪೊಲೀಸರಿಂದ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಾಧ್ಯತೆ..!