Download Our App

Follow us

Home » ರಾಜ್ಯ » ಬಸ್-ಲಾರಿ ಮಧ್ಯೆ ಭೀಕರ ಅಪಘಾತ – ಐವರ ದುರ್ಮರಣ..!

ಬಸ್-ಲಾರಿ ಮಧ್ಯೆ ಭೀಕರ ಅಪಘಾತ – ಐವರ ದುರ್ಮರಣ..!

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸೂರ್ಯಪೇಟ್​- ಖಮ್ಮಂ ಹೆದ್ದಾರಿಯಲ್ಲಿ ನಡೆದಿದೆ.

ಖಾಸಗಿ ಬಸ್,​ ಹೆದ್ದಾರಿ ಬಳಿ ನಿಲ್ಲಿಸಿದ ಮರಳು ತುಂಬಿದ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿ ಒಡಿಶಾದಿಂದ ಹೈದರಾಬಾದ್​ಗೆ ಉದ್ಯೋಗಕ್ಕಾಗಿ ವಲಸಿಗ ಕಾರ್ಮಿಕರನ್ನು ಕರೆತರಲಾಗುತ್ತಿತ್ತು. ಸಾವನ್ನಪ್ಪಿದ ಐವರು ಒಡಿಶಾದ ವಲಸಿಗ ಕಾರ್ಮಿಕರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್​ ವೈದ್ಯಕೀಯ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಗುರುವಾರ 2.30ಕ್ಕೆ ಒಡಿಶಾದ ನೌಪಡ ಜಿಲ್ಲೆಯಲ್ಲಿನ ಸಿನಪಲ್ಲಿಯಿಂದ ಈ ಬಸ್​ ಹೈದರಾಬಾದ್​ಗೆ ಪ್ರಯಾಣಿಸುತ್ತಿತ್ತು. ಇನ್ನು ಕೊವ್ವುರ್​ನಿಂದ ಕೊಹಿರ್​​ಗೆ ಸಾಗುತ್ತಿದ್ದ ಮರಳು ತುಂಬಿದ ಲಾರಿ ಟೈರ್​ ಬಸ್ಟ್​ ಆದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಆದರೆ, ವೇಗವಾಗಿ ಬರುತ್ತಿದ್ದ ಬಸ್​ ಈ ಲಾರಿಗೆ ಗುದ್ದಿದೆ.

ಇದನ್ನೂ ಓದಿ : ಪೊಲೀಸ್​​ ಇಲಾಖೆಯಲ್ಲಿ ಭರ್ಜರಿ ಸರ್ಜರಿ – 11 DySP, 41 ಪೊಲೀಸ್ ಇನ್ಸ್​ಪೆಕ್ಟರ್​​ಗಳ ವರ್ಗಾವಣೆ..!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here