ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ನ್ನು ಅಭಿಷೇಕ್ ಅಂಬರೀಶ್ ಮೊದಲ ಬಾರಿ ಭೇಟಿಗೆ ಆಗಮಿಸಿದ್ದಾರೆ. ಈ ವೇಳೆ ಅಭಿಷೇಕ್ಗೆ ನಟ ಚಿಕ್ಕಣ್ಣ, ಧನ್ವೀರ್ ಕೂಡಾ ಸಾಥ್ ಕೊಟ್ಟಿದ್ದಾರೆ.
ನಟ ದರ್ಶನ್ಗೆ ಆಪ್ತರಾಗಿರುವ ಅಭಿಷೇಕ್, ಚಿಕ್ಕಣ್ಣ, ಧನ್ವೀರ್ ಚಾಮರಾಜಪೇಟೆಯ ಹೋಮ-ಹವನದಲ್ಲಿ ಭಾಗಿಯಾಗಿದ್ದರು. ನಂತರ ದರ್ಶನ್ ಆಪ್ತರು ಅಲ್ಲಿಂದ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ.
ದರ್ಶನ್ ಜೈಲು ಸೇರಿದ ನಂತರ ಇದೇ ಮೊದಲ ಬಾರಿ ಚಿಕ್ಕಣ್ಣ ಭೇಟಿ ನೀಡಿದ್ದು, ಅವರು ದರ್ಶನ್ ಕೇಸ್ನಲ್ಲಿ ವಿಚಾರಣೆಯನ್ನೂ ಎದುರಿಸಿದ್ದಾರೆ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಸಭೆ ಮೀಟಿಂಗ್ ಬಗ್ಗೆ ಚಿಕ್ಕಣ್ಣ ಅವರ ಹೇಳಿಕೆ ಕೂಡ ದಾಖಲಾಗಿದೆ.
ಇದನ್ನೂ ಓದಿ : ‘ಹನಿ ಹನಿ’ ಆಲ್ಬಂ ಸಾಂಗ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್..!
Post Views: 286