Download Our App

Follow us

Home » ಸಿನಿಮಾ » ಸೆಟ್ಟೇರಿತು ‘ಅಭಿಮನ್ಯು s/o ಕಾಶಿನಾಥ್’.. ಕಾಶಿನಾಥ್ ಪುತ್ರನ ಸಿನಿಮಾಗೆ ಕೋಮಲ್ ಸಾಥ್..!

ಸೆಟ್ಟೇರಿತು ‘ಅಭಿಮನ್ಯು s/o ಕಾಶಿನಾಥ್’.. ಕಾಶಿನಾಥ್ ಪುತ್ರನ ಸಿನಿಮಾಗೆ ಕೋಮಲ್ ಸಾಥ್..!

ಸ್ಯಾಂಡಲ್‌ವುಡ್​​ನ ಖ್ಯಾತ ನಟ ಮತ್ತು ನಿರ್ದೇಶಕ ಕಾಶೀನಾಥ್ ತಮ್ಮ ಸಿನಿಮಾ ಮತ್ತು ನಿರ್ದೇಶನದ ಸಿನಿಮಾಗಳಿಂದಲೇ ಜನಮನ ಗೆದ್ದಿದ್ದಾರೆ. ಈಗ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಮನ್ಯು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಅಭಿಮನ್ಯು ಸನ್‌ ಆಫ್‌ ಕಾಶೀನಾಥ್ ಎಂಬ ಶೀರ್ಷಿಕೆ ಇಡಲಾಗಿದೆ.

ಇತ್ತೀಚಿಗೆ ಈ ಸಿನಿಮಾ ಮುಹೂರ್ತ ನೆರವೇರಿದೆ. ಬೆಂಗಳೂರಿನ ಸಹಕಾರ ನಗರದ ಛೇರ್ಮನ್ ಕ್ಲಬ್‌ನಲ್ಲಿ ನಡೆದ ಮುಹೂರ್ತಕ್ಕೆ ವಿಶೇಷ ಅತಿಥಿಯಾಗಿ ನಟ ಕೋಮಲ್ ಕುಮಾರ್ ಆಗಮಿಸಿದ್ದರು. ಅಭಿಮನ್ಯು ಹೊಸ ಚಿತ್ರಕ್ಕೆ ಕೋಮಲ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಬಳಿಕ ಮಾತನಾಡಿದ ಕೋಮಲ್ ಅವರು, ನಾನು ಇಂಡಸ್ಟ್ರಿಗೆ ಬಂದು 32 ವರ್ಷವಾಯ್ತು. ಕ್ಲ್ಯಾಪ್ ಮಾಡಿದ್ದು ಇದೇ ಮೊದಲು. ಸಿನಿಮಾ ಚೆನ್ನಾಗಿ ಆಗಬೇಕು. ಯಾರು ಕ್ಲ್ಯಾಪ್ ಹೊಡೆದಿದ್ದು ಅಂತಾ ಆಗಬಾರದು. ಅಭಿಮನ್ಯು ಯಾರೋ ನನಗೆ ಸಪೋರ್ಟ್ ಮಾಡುತ್ತಿಲ್ಲ ಸರ್. ನಮ್ಮ ತಂದೆ ಇದ್ದಿದ್ದರೆ ಸಪೋರ್ಟ್ ಮಾಡುತ್ತಿದ್ದರು ಎಂದರು. ನನಗೆ ಅದು ಬಹಳ ಕನೆಕ್ಟ್ ಆಯಿತು. ಡೋಂಟ್ ವರಿ ದೇವರು ಇದ್ದಾನೆ. ಯಾವತ್ತು ಮೆಟ್ಟಿಲ್ಲನ್ನೂ ನೋಡುತ್ತಾ ನಿಲ್ಲಬಾರದು. ಹತ್ತಿ ಪ್ರಯತ್ನಪಡಬೇಕು. ನಿಮಗೆ ಒಳ್ಳೆದಾಗುತ್ತದೆ. ಪ್ರಯತ್ನಪಡುತ್ತಾ ಇರಿ. ಯಾರಿಗೂ ಧೀಡಿರ್ ಎಂದು ಯಶಸ್ಸು ಸಿಗಲ್ಲ. ಯಾರು ಇಲ್ಲ ಎಂಬುದನ್ನು ತಲೆಯಿಂದ ತೆಗೆದು ದೇವರ ಇದ್ದಾನೆ ಎಂಬುದನ್ನು ಇಟ್ಟುಕೊಳ್ಳಿ. ನಿಮಗೋಸ್ಕರ‌ ನಾನು ಬಂದೆ. ಚಿತ್ರದ ನಿರ್ದೇಶಕರಿಗೆ, ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಅಭಿಮನ್ಯು ಅವರು, ನಿರ್ದೇಶಕರ ರಾಜ್‌ಮುರಳಿಯವರು ಅಪ್ಪನ ಜಾನರ್ ಇಟ್ಕೊಂಡು ಈಗಿನ ಕಾಲದ ಹುಡುಗರಿಗೆ ಮಾಡಿದರೆ ಹೇಗಿರುತ್ತೆ? ಅದನ್ನು ನಿಮ್ಮನ್ನು ಇಟ್ಕೊಂಡು ಪ್ಲಾನ್ ಮಾಡಿಕೊಂಡಿದ್ದೀನಿ ಸರ್ ಅಂದರು. ಅಪ್ಪ ಇದ್ದಾಗ ನನಗೆ ಬರುತ್ತಿದ್ದ ಆಫರ್ ಇಂತಹದ್ದೇ. ಅಪ್ಪ ಡೈರೆಕ್ಷನ್ ಮಾಡಬೇಕು. ನಾನು ಆಕ್ಟಿಂಗ್ ಮಾಡಬೇಕು. ಅನಂತನ ಅವಾಂತರ ಪಾರ್ಟ್ 2 ಮಾಡಬೇಕು. ಅನುಭವ ಪಾರ್ಟ್‌ 2 ಮಾಡಬೇಕು ಇದೇ ತರ ಹೆಚ್ಚು ಬರುತ್ತಿತ್ತು. ಅಪ್ಪನಿಗೂ ಆ ಕ್ಯಾರೆಕ್ಟರ್ ನನಗೆ ಸೂಟ್ ಆಗಲ್ಲ ಅಂತ ಅನಿಸುತ್ತಿತ್ತು. ನನಗೂ ಅದನ್ನು ಮಾಡುತ್ತೇನೆ ಅನ್ನೋ ಕಾನ್ಫಿಡೆನ್ಸ್ ಇರಲಿಲ್ಲ. ಸನ್ ಆಫ್ ಕಾಶೀನಾಥ್ ಸಿನಿಮಾ ಟೈಟಲ್ ರಿಜೆಸ್ಟರ್ ಮಾಡೋಣ ಅಂತ ಹೋದಾಗ ಯಾರೋ ಮಾಡಿಬಿಟ್ಟಿದ್ದರು. ಎಲ್ಲರೂ ಹೇಳ್ತಾರೆ ಕಾಶೀನಾಥ್ ಮಗನಿಗೆ ಸನ್ ಆಫ್‌ ಕಾಶೀನಾಥ್ ಸಿಗಲಿಲ್ಲ ಅಂತಾರೆ. ನಿರ್ದೇಶಕರು ಟೈಟಲ್ ಇಲ್ಲ ಸರ್ ಯಾರೋ ರಿಜಿಸ್ಟರ್ ಮಾಡಿಸಿದ್ದಾರೆ. ಸುಮ್ಮನೆ ಏನೋ ಸರಿಸುವುದಕ್ಕೆ ಆಗಲ್ಲ ಅಂದರು. ಆಮೇಲೆ ಅವರೇ ಯೋಚನೆ ಮಾಡಿ ಅಭಿಮನ್ಯು ಸನ್ ಆಫ್ ಕಾಶೀನಾಥ್ ಅಂತ ಹೇಳಿದರು ಎಂದು ತಿಳಿಸಿದ್ದಾರೆ.

ಈ ಚಿತ್ರದ  ಫಸ್ಟ್​​​ಲುಕ್ ಪೋಸ್ಟರ್ ಬಹಳ ಇಂಪ್ರೆಸಿವ್ ಆಗಿದೆ. ಅಭಿಮನ್ಯು S/o ಕಾಶೀನಾಥ್ ಎಂಬ ಶೀರ್ಷಿಕೆ ಜೊತೆಗೆ ಇದು ಹೊಸ ಅನುಭವ ಎಂಬ ಅಡಿಬರಹ ಆಕರ್ಷಕವಾಗಿದೆ. ಬುಕ್ ಹಿಡಿದು ಅರ್ಧ ಮುಖ ತೋರಿಸುತ್ತಿರುವ ಅಭಿಮನ್ಯು ಸೂಟು ಬೂಟು ತೊಟ್ಟು ಸ್ಟೈಲೀಶ್ ಗೆಟಪ್​​ನಲ್ಲಿ ಮಿಂಚಿದ್ದಾರೆ.

8MM ಸಿನಿಮಾದಲ್ಲಿ ಕೋ ಡೈರೆಕ್ಟರ್ ಆಗಿ, ಒಂದಷ್ಟು ಚಿತ್ರಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟೆಡ್ ಡೈರೆಕ್ಟರ್ ಆಗಿ‌ ದುಡಿದಿರುವ ರಾಜ್ ಮುರಳಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಅಭಿಮನ್ಯು s/ o ಕಾಶಿನಾಥ್ ಚಿತ್ರದ ಮೂಲಕ ರಾಜ್ ಕಾಮಿಡಿ ಡ್ರಾಮಾ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಬಹಳ ಸಿನಿಮಾ ಪ್ರೀತಿಯಿಂದ ಐಸಿರಿ ಪ್ರೊಡಕ್ಷನ್ ನಡಿ ಮಾರಪ್ಪ ಶ್ರೀನಿವಾಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ನಾಯಕ ಅಭಿಮನ್ಯುಗೆ ಸ್ಪಂದನ ಸೋಮಣ್ಣ, ವಿಜಯಶ್ರೀ ಕಲ್ಬುರ್ಗಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ, ಚಂದನ್ ಪಿ ಸಂಕಲನ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಿಂದ ಅಭಿಮನ್ಯು s/ o ಕಾಶಿನಾಥ್ ಚಿತ್ರದ ಶೂಟಿಂಗ್ ಶುಭಾರಂಭವಾಗಲಿದೆ. ಚಿಕ್ಕಮಗಳೂರು, ಮೈಸೂರು, ಹೈದ್ರಾಬಾದ್ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ : ದೊಡ್ಮನೆಯಲ್ಲಿ ಜಗದೀಶ್-ಹಂಸಾ ಡುಯೇಟ್.. ಹೇಗಿರುತ್ತೆ ಇಂದು ಕಿಚ್ಚನ ಪಂಚಾಯ್ತಿ?

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here