ಬೆಂಗಳೂರು : ರಾಜಕಾರಣಿಗಳು, ಜಡ್ಜ್ಗಳು, ವಕೀಲರು, ಹಾಗೂ ಸಿರಿವಂತರು ಪ್ರತಿದಿನ ಲಂಚ್, ಡಿನ್ನರ್ ಮಾಡುವ ಬೆಂಗಳೂರು ಹೃದಯಭಾಗದಲ್ಲಿರುವ ಕ್ಯಾಪಿಟಲ್ ಹೋಟೆಲ್ನ ಊಟದಲ್ಲಿ ಜಿರಳೆ ಪತ್ತೆಯಾಗಿದೆ.
ಅಷ್ಟೇ ಅಲ್ಲ ಪ್ರತಿಷ್ಠಿತ ಕ್ಯಾಪಿಟಲ್ನಲ್ಲಿ ಕಿಚನ್ ಕೂಡ ಗಲೀಜಾಗಿದೆ.
ಹೈಕೋರ್ಟ್ ವಕೀಲೆ ಶೀಲಾ ಅವರು ನಿನ್ನೆ ಸಂಜೆ ಊಟಕ್ಕೆಂದು ಕ್ಯಾಪಿಟಲ್ ಹೋಟೆಲ್ಗೆ ಹೋಗಿದ್ದರು. ಆಗ ಪನ್ನೀರ್ ಗ್ರೇವಿ ರೋಟಿ ಆರ್ಡರ್ ಮಾಡಿದ್ದರು.
ಒಂದೆರಡು ತುತ್ತು ತಿನ್ನುತ್ತಿದ್ದಂತೆ ಗ್ರೇವಿಯಲ್ಲಿ ಜಿರಳೆ ಪತ್ತೆಯಾಗಿದೆ. ಶೀಲಾ ಅವರು ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಸಿಬ್ಬಂದಿಯು ಉಡಾಫೆ ಉತ್ತರ ಕೊಟ್ಟು ಬೇರೆ ಊಟ ನೀಡೋದಾಗಿ ಹೇಳಿದ್ದಾರೆ.
ವಕೀಲೆ ಹೋಟೆಲ್ ಕಿಚನ್ಗೆ ಹೋಗಿ ಅಲ್ಲಿನ ಗಲೀಜು ಕಂಡು ಗರಂ ಆಗಿ, ಹೋಟೆಲ್ ಕಿಚನ್ ನೋಡಿದ್ರೆ ವಾಕರಿಕೆ ಬರುತ್ತೆ. ಹೋಟೆಲ್ ಪಾತ್ರೆ ತೊಳೆದು ಎಷ್ಟು ದಿನವಾಯ್ತೋ ಅನ್ನೋ ಸ್ಥಿತಿಯಿದೆ.
ಕ್ಯಾಪಿಟಲ್ ಕಿಚನ್ಗಿಂತಲೂ ರಸ್ತೆ ಬದಿ ಹೋಟೆಲ್ ಲೇಸು ಎಂದಿದ್ದಾರೆ.
ಇನ್ನೂ ವಕೀಲೆ ಶೀಲಾ ಅವರು ಕ್ಯಾಪಿಟಲ್ ಹೋಟೆಲ್ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಹೋಟೆಲ್ನಿಂದಲೇ ಫುಡ್ ಇನ್ಸ್ಪೆಕ್ಟರ್ಗೂ ಕಾಲ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ : 16000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆ..