ಬೆಂಗಳೂರು : ಹೆಂಡತಿಯನ್ನು ಕೊಲೆ ಮಾಡಿ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ಶಾಮಣ್ಣ (40) ಮತ್ತು ಸುಮಾ (35) ಮೃತ ದುರ್ದೈವಿಗಳು. ಹೆಂಡತಿಗೆ ಡಂಬಲ್ಸ್ನಿಂದ ಹೊಡೆದು ಕೊಲೆ ಮಾಡಿ ನಂತರ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಪೋಲಿಸರು ದೌಡಾಯಿಸಿದ್ದಾರೆ.
ಇದನ್ನೂ ಓದಿ :ಟೈಗರ್ ವಿನೋದ್ ಪ್ರಭಾಕರ್ ಅಭಿನಯದ “ಮಾದೇವ” ಚಿತ್ರ ಜೂ.6ಕ್ಕೆ ರಿಲೀಸ್!
Author: Btv Kannada
Post Views: 630







