ಬೆಂಗಳೂರು : ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅವ್ಯವಹಾರ ಆರೋಪಕ್ಕೆ ಉತ್ತರ ಕೊಡಲು ಕೆಪಿಸಿಸಿ ವಕ್ತಾರರಾದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮತ್ತು ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಇಂದು ಸುದ್ಧಿಗೋಷ್ಠಿ ನಡೆಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು, ಚುನಾವಣಾ ಅಕ್ರಮ ನಡೆಸಿದ ಚಿಲುಮೆ ಯಾರ ಕಂಪನಿ? ಚಿಲುಮೆ ಅಕ್ರಮದ ಬಗ್ಗೆ ಅಶ್ವಥ್ ನಾರಾಯಣ್ ಏನ್ ಅಂತಾರೆ? ಅಶ್ವಥ್ ನಾರಾಯಣ್ ಅವರೇ ಹೊಂಬಾಳೆ ಕನ್ಸ್ಟ್ರಕ್ಷನ್ ಯಾರದ್ದು? ಹೊಂಬಾಳೆ ಡಿಸ್ಟ್ರಿಬ್ಯೂಶನ್, ಹೊಂಬಾಳೆ ಸಿನಿಮಾಸ್ ಯಾರದ್ದು? ಎಂದು
ಅಶ್ವಥ್ ನಾರಾಯಣ್ ಬೇನಾಮಿ ಕಂಪನಿ ಬಗ್ಗೆ ಪ್ರಶ್ನಿಸಿದ್ದಾರೆ.
ಅಶ್ವಥ್ ನಾರಾಯಣ್ ಬೇನಾಮಿ ಕಂಪನಿಗೆ ಟೆಂಡರ್ ಸಿಕ್ಕಿಲ್ಲವೆಂದು ಜಾರ್ಜ್ ವಿರುದ್ಧ ಆರೋಪ ಮಾಡಿದ್ದಾರೆ. ಹೊಂಬಾಳೆ, ಚಿಲುಮೆ, ಸಹ್ಯಾದ್ರಿ ಅಶ್ವಥ್ ನಾರಾಯಣ್ ಬೇನಾಮಿ ಕಂಪನಿಗಳು. ಸಹ್ಯಾದ್ರಿಗೆ ಸ್ಮಾರ್ಟ್ ಮೀಟರ್ ಟೆಂಡರ್ ಸಿಕ್ಕಿಲ್ಲವೆಂದು ಅಶ್ವಥ್ ನಾರಾಯಣ್ ಆರೋಪ ಮಾಡಿದ್ದಾರೆ ಎಂದು ಅಶ್ವಥ್ ನಾರಾಯಣ್ಗೆ ರಮೇಶ್ ಬಾಬು ತಿರುಗೇಟು ಕೊಟ್ಟಿದ್ದಾರೆ.

ಈ ಹಿಂದೆ ಅವರ ಸರ್ಕಾರದಲ್ಲಿ ಆಂಬುಲೆನ್ಸ್ನಲ್ಲಿ ಭ್ರಷ್ಟಾಚಾರ ಆಗಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನ ಅಡಿಯಲ್ಲಿ ನಾವು ಟೆಂಡರ್ ಕೊಟ್ಟಿದ್ದೇವೆ. ಜಾರ್ಜ್ ಒಬ್ಬ ಅಲ್ಪಸಂಖ್ಯಾತ ಸಮುದಾಯದ ನಾಯಕ ಅಂತ ಆರೋಪ ಮಾಡದು ಸರಿ ಅಲ್ಲ. ಜನರ ದಾರಿ ತಪ್ಪಿಸುವ ಕೆಲಸವನ್ನು ಅಶ್ವತ್ಥ್ ನಾರಾಯಣ್ ಮಾಡ್ತಿದ್ದಾರೆ. ಈ ಹಿಂದೆ ಈಶ್ವರಪ್ಪ ಅವ್ರು ಇಂಧನ ಕೆಲಸ ಮಾಡಕ್ಕೆ ಆಗದೆ ರಾಜೀನಾಮೆ ಕೊಟ್ಟಿದ್ರು. ನಂತರ ಇಂಧನ ಇಲಾಖೆಯಲ್ಲಿ ಶೋಭಾ ಕರಂದ್ಲಾಜೆ ಅವರು ಅವ್ಯವಹಾರ ಮಾಡಿದ್ರು. ಆದ್ರೆ ಈಗ ಜಾರ್ಜ್ ಅವರನ್ನು ಅಪಮಾನ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಇದನ್ನೂ ಓದಿ : ನಿಮ್ಮ ಕಂಪನಿಗೆ ಟೆಂಡರ್ ಸಿಕ್ಕಿಲ್ಲ ಅಂತ ಸುಳ್ಳು ಆರೋಪ – ಅಶ್ವಥ್ ನಾರಾಯಣ್ ವಿರುದ್ಧ ಎಂ. ಲಕ್ಷ್ಮಣ್ ತಿರುಗೇಟು!







