ನಿಮ್ಮ ಕಂಪನಿಗೆ ಟೆಂಡರ್ ಸಿಕ್ಕಿಲ್ಲ ಅಂತ ಸುಳ್ಳು ಆರೋಪ – ಅಶ್ವಥ್ ನಾರಾಯಣ್ ವಿರುದ್ಧ ಎಂ. ಲಕ್ಷ್ಮಣ್ ತಿರುಗೇಟು!

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಸತ್ಯಾಸತ್ಯತೆ ಮತ್ತು ಬಿಜೆಪಿ-ಜೆಡಿಎಸ್ ದುರುದ್ದೇಶ ತಿಳಿಸುವ ವಿಚಾರವಾಗಿ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಮತ್ತು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇಂದು ಸುದ್ಧಿಗೋಷ್ಠಿ ನಡೆಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಅವರು, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಮಾರ್ಟ್ ಮೀಟರ್ ವಿಚಾರದಲ್ಲಿ ದೊಡ್ದ ಬೊಬ್ಬೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ನಾನು ಒಬ್ಬ ಇನ್ ಏಜೆಂಟ್ಸ್. ನಾನು ಅಧ್ಯಯನ ಮಾಡಿ ಬಂದಿದ್ದೇನೆ. ಕೇಂದ್ರ ಸರ್ಕಾರ 2019ರಲ್ಲಿ ಈ ವ್ಯವಸ್ಥೆ ತಂದಿದೆ. ಇದರಲ್ಲಿ ತಂತ್ರಜ್ಞಾನ ಇದೆ. ಬಿಲ್ ಕಟ್ಟಿಲ್ಲ ಅಡ್ರೆಡಿಸ್ ಕನೆಕ್ಟ್ ಆಗುತ್ತೆ. ಮತ್ತೆ ಬಿಲ್ ಕಟ್ಟಿದ ತಕ್ಷಣ ಕನೆಕ್ಟ್ ಆಗುತ್ತೆ. ದೇಶದಲ್ಲಿ ಎಲ್ಲಾ ಕಡೆ ಸ್ಮಾರ್ಟ್ ಮೀಟರ್ ಹಾಕಬೇಕು ಅಂತಾ ನಿಯಮ ಇದೆ. ಕರ್ನಾಟದಲ್ಲಿ ಇನ್ನೂ ಶುರು ಮಾಡಿಲ್ಲ. ಮಾಡಕ್ಕೆ ಸಮಸ್ಯೆ ಶುರು ಆಗಿದ್ದವೇ. ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಾವು ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ನಡೆದುಕೊಂಡಿದ್ದೇವೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಟೆಂಡರ್ ಆರಂಭ ಆಗಿತ್ತು. ಕೆಲವು ಸೆಂಟರ್ ನಿಯಾಮ ಅಡಿಯಲ್ಲಿ ಬಿಡ್ ಕರೆಯಲಾಗಿತ್ತು. 3 ಬಿಡರ್ ಭಾಗವಾಗಿದ್ದರು. ಅದರಲ್ಲಿ 1 ಸರಿಯಾದ ದಾಖಲೆ ಕಟ್ಟಿಲ್ಲ. ಅದಕ್ಕೇ ಬಿಡ್​ನಲ್ಲಿ ಅವ್ರಿಗೆ ಅವಕಾಶ ಕೊಟ್ಟಿಲ್ಲ. 2 ಜನ್ರಿಗೆ ಆವಕಾಶ ಕೊಡಲಾಗಿತ್ತು. KERC ವ್ಯವಸ್ಥೆಗೆ ಎಲ್ಲ ರಾಜ್ಯಗಳಲ್ಲೂ ಬರುತ್ತವೆ. ಅದರಲ್ಲಿ ನಮ್ಮ ಕರ್ನಾಟಕ ಸೇರಿಲ್ಲ. ಅದಕ್ಕೆ ಕಾರಣ ಈ ಹಿಂದಿನ ಬಿಜೆಪಿ ಸರ್ಕಾರ.

ಅಶ್ವಥ್ ನಾರಾಯಣ ಅವ್ರು ಆರೋಪ ಮಾಡುತ್ತಿದ್ದಾರೆ. ಅವ್ರು 900 ರೂಪಾಯಿಗೆ ಮೀಟರ್ ಸಿಗುತ್ತೆ ಅಂತಾ ಹೇಳ್ತಿದ್ದಾರೆ. ಅವರದ್ದು ಸುಳ್ಳು ಆರೋಪ. ಬ್ಲಾಕ್ ಮೇಲ್ ಮಾಡುವ ಉದ್ದೇಶ. ಅವರ ಕಂಪನಿಗೆ ಟೆಂಡರ್ ಸಿಕ್ಕಿಲ್ಲ ಅಂತ ಸುಳ್ಳು ಆರೋಪ ಮಾಡಿದ್ದಾರೆ. ಅಶ್ವಥ್ ನಾರಾಯಣಸ್ವಾಮಿ ಅವರೇ ನಾನು ನಿಮ್ಮ ಆಫೀಸ್​ಗೆ ಬರುತ್ತೇನೆ. ಸಹ್ಯಾದ್ರಿ ಅವ್ರ ಬಿಡ್ಡ್ ಕ್ಯಾನ್ಸಲ್ ಅದ ಮೇಲೆ ಯಾಕೆ ಈ ರೀತಿ ಆರೋಪ ಮಾಡ್ತ ಇದೀರಾ? ನಿಮ್ಮಗೆ ಮಾನ ಮರ್ಯಾದೆ ಇದಿಯಾ?

ಅಶ್ವಥ್ ನಾರಾಯಣ ಅವರೇ.. ಸಹ್ಯಾದ್ರಿ ಅವರಿಗೂ ನಿಮಗೂ ಏನು ಸಂಬಂದ ಹೇಳಿ? 2011ರಿಂದ ನೀವು ಏನ್ ಏನ್ ಮಾಡಿದ್ದೀರಿ ಅನ್ನುವುದು ನಮ್ಮ ಬಳಿ ಇದೆ. ಅದನ್ನ ಹಂತಹಂತವಾಗಿ ನಾವು ಬಿಡುಗಡೆ ಮಾಡುತ್ತೇವೆ. ಯಾವ ಯೋಜನೆಯನ್ನು ಮಾಡಲು ಬಿಡುತ್ತಿಲ್ಲಾ. 18,600 ಕೋಟಿ ರೂ ಸ್ಕ್ಯಾಮ್ ಎಲ್ಲಿ ಆಗಿದೆ ಎಂದು ಪ್ರೂವ್ ಮಾಡಿ ಎಂದು ಎಂ. ಲಕ್ಷ್ಮಣ್ ಅವರು ಚಾಲೆಂಜ್​ ಮಾಡಿದ್ದಾರೆ.

ನಮಗೆ ಸ್ಮಾರ್ಟ ಮೀಟ್ರ್ ಬೇಡ ಎಂದು ನೀವು ಕೇಂದ್ರ ಸರ್ಕಾರದ ಪತ್ರ ಬರೆಯಿರಿ. ನಿಮ್ಮ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೂ ಕೇಳಿದ್ದಾರೆ. ಸ್ಮಾರ್ಟ ಮೀಟರ್ ಕಡ್ಡಾಯ ಅಂತ ಹೇಳಿದ್ದಾರೆ. ಎಲ್ಲಾ ಆದ್ರೆ ರಾಜ್ಯಕ್ಕೆ ಕೊಡುವ ಅನುದಾನ ಕೊಡಲ್ಲ ಅಂತ ಹೇಳಿದ್ದಾರೆ. ನೀವು ಹೇಳ್ತ ಇದೀರಾ ಜಾಸ್ತಿ ಅಳವಡಿಕೆ ಹಣ ಜಾಸ್ತಿ ಇದೆ ಅಂತೀರಾ.. ನಿಮ್ಮ ಅಡಳಿತ ಇರುವ ರಾಜ್ಯದಲ್ಲಿ ಎಲ್ಲಿ ಕಡಿಮೆ ಇದೆ ಹೇಳಿ. ನಿಮ್ಮ ಕಂಪನಿಗೆ ಸಿಕ್ಕಿಲ್ಲ ಅಂಥ ಹೇಳಿ ಯಾಕೇ ಹೀಗೆ ಮಾಡ್ತ ಇದೀರಾ? ಕೇಂದ್ರ ಸರ್ಕಾರದಿಂದ ಅನ್ಯಾಯ ಅಗುವಂತ ಕೆಲಸ ಮಾಡಬೇಡಿ ಅವರಿಂದ ಸಿಗುವ ಅನುದಾನ ಸಿಗದ ರೀತೀ ಮಾಡಬೇಡಿ ಎಂದು ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಅವರು ಗುಡುಗಿದ್ದಾರೆ.

ಇದನ್ನೂ ಓದಿ : S.T ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ಗೆ ಬಿಗ್​ ಶಾಕ್ – ಬಿಜೆಪಿಯಿಂದ 6 ವರ್ಷ ಉಚ್ಚಾಟನೆ!

Btv Kannada
Author: Btv Kannada

Read More