ಬೆಂಗಳೂರು : BMTC ಕಂಡಕ್ಟರ್- ಪ್ರಯಾಣಿಕನ ನಡುವೆ ಮಾರಾಮಾರಿ ನಡೆದಿದ್ದು, ಬಸ್ನಲ್ಲಿಯೇ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಪ್ರಯಾಣಿಕ ಬಸ್ನಲ್ಲಿ ಬೆಕ್ಕು ತಂದಿದ್ದ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ನಡೆದಿದೆ. ಮಾತಿಗೆ ಮಾತಿಗೆ ಬೆಳೆದು ಪರಸ್ಪರ ಹಲ್ಲೆ ನಡೆಸಿದ್ದಾರೆ.

ಮಾನವೀಯತೆ ತೋರಿದ ಪ್ರಯಾಣಿಕನ ಮೇಲೆ ಕಂಡಕ್ಟರ್ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ನಿರ್ವಾಹಕನ ನಡೆಗೆ ಸಹ ಪ್ರಯಾಣಿಕರು ಗರಂ ಆಗಿದ್ದಾರೆ. ಡಿಮಾರ್ಟ್ ನಲ್ಲಿ ಕೆಲಸ ಮಾಡ್ತಿದ್ದ ಮಂಜುನಾಥ್ ಎಂಬಾತನಿಗೆ ಯಾರೋ ಅಪರಿಚಿತರು ಬೆಕ್ಕಿನ ಮರಿಯನ್ನ ಬಿಸಾಕಿ ಹೋಗಿರೋದು ತಿಳಿದಿದ್ದು, ಗಾಯಗೊಂಡ ಬೆಕ್ಕಿನ ಮರಿಗೆ ಮಂಜುನಾಥ್ ಆಹಾರ ನೀಡಿದ್ದಾನೆ. ನಂತರ ಅಲ್ಲೇ ಬಿಟ್ರೆ ಸರಿಯಾಗಲ್ಲ ಎಂದು ಆಯಿಲ್ ಬಾಕ್ಸ್ ನಲ್ಲಿ ಉಸಿರಾಡೋಕೆ ವ್ಯವಸ್ಥೆ ಮಾಡಿ ಅದನ್ನು ಬಸ್ನಲ್ಲೇ ಮನೆಗೆ ಕರೆದೊಯ್ಯುತ್ತಿದ್ದ.

ಮಂಜುನಾಥ್ ರಾತ್ರಿ 10 ಗಂಟೆಗೆ ಸ್ಯಾಟ್ ಲೈಟ್ನಲ್ಲಿ ಬಸ್ ಹತ್ತಿದ. ಬಸ್ ಸ್ಯಾಟ್ ಲೈಟ್ ನಿಂದ ಪೀಣ್ಯ 2ನೇ ಹಂತಕ್ಕೆ ಹೋಗ್ತಿತ್ತು. ಗಾಯಗೊಂಡ ಬೆಕ್ಕಿನ ಮರಿ ಬಸ್ನಲ್ಲಿ ಕೂಗಿದೆ. ಈ ವೇಳೆ ಕಂಡಕ್ಟರ್ ಪ್ರಶ್ನೆ ಮಾಡಿದ್ದಾನೆ. ಬಸ್ನಲ್ಲಿ ಬೆಕ್ಕನ್ನ ತರಲು ಅವಕಾಶ ಇಲ್ಲ ಎಂದು ಕಿರಿಕ್ ಮಾಡಿದ್ದಾನೆ. ಇಲ್ಲೇ ಇಳಿದು ಬಿಡು ಎಂದು ಪ್ರಯಾಣಿಕನಿಗೆ ಒತ್ತಾಯಿಸಿದ್ದಾನೆ. ಸರ್ ರಾತ್ರಿ 10 ಗಂಟೆಯಾಗಿದೆ, ಇಲ್ಲಿ ಇಳಿದ್ರೆ ಸರಿಯಾಗಲ್ಲ. ಬೆಕ್ಕು ಯಾರಿಗೂ ತೊಂದರೆ ಮಾಡಲ್ಲ, ಹಂಗೂ ಇಳಿಬೇಕಂದ್ರೆ ಬಸ್ ಸ್ಟ್ಯಾಂಡ್ ನಲ್ಲಿ ಇಳಿಸಿ, ಸಿಗ್ನಲ್ ನಲ್ಲಿ ಇಳಿಯಲ್ಲ ಎಂದು ಪಟ್ಟುಹಿಡಿದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ನಡೆದು ನಂತರ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ : ರೇವ್ ಪಾರ್ಟಿ ಮೇಲೆ ದಾಳಿ – ಯುವಕ, ಯುವತಿಯರನ್ನು ವಶಕ್ಕೆ ಪಡೆದ ದೇವನಹಳ್ಳಿ ಪೊಲೀಸರು!







