ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಸುಮಾರು 26 ಜನ ಅಮಾಯಕರು ಬಲಿಯಾಗಿದ್ದರು. ಅದರಲ್ಲಿ ಬಹುಪಾಲು ಭಾರತದವರೇ ಇದ್ದರು. ಅವರನ್ನು ಕಳೆದುಕೊಂಡು ಇದೀಗ ಇಡೀ ಕುಟುಂಬ ದುಖಃದ ಕಡಲಲ್ಲಿ ಮುಳುಗಿದೆ. ಈ 26 ಪ್ರವಾಸಿಗರಲ್ಲಿ ಒಬ್ಬರಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕುಟುಂಬಕ್ಕೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಅಲ್ಲದೇ, ಅವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿಯೊಂದಿಗೆ ಜಮ್ಮು ಕಾಶ್ಮೀರಕ್ಕೆ ಹೋದಾಗ ಈ ಹತ್ಯೆ ನಡೆದಿತ್ತು. ಅವರ ಅಂತ್ಯಕ್ರಿಯೆಯನ್ನು ಏಪ್ರಿಲ್ 23ರಂದು ನಡೆಸಲಾಯಿತು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಕೂಡ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ದಾಳಿಗೂ ಆರು ದಿನಗಳ ಹಿಂದೆ ಮದುವೆಯಾಗಿದ್ದ ಲೆಫ್ಟಿನೆಂಟ್ ಅಧಿಕಾರಿ ವಿನಯ್ ನರ್ವಾಲ್, ತಮ್ಮ ಪತ್ನಿಯೊಂದಿಗೆ ಹನಿಮೂನ್‌ಗೆಂದು ಪಹಲ್ಗಾಮ್ಗೆ ಹೋಗಿದ್ದರು. 26 ಏಪ್ರಿಲ್ 19ರಂದು ನಡೆದ ವಿವಾಹ ಆರತಕ್ಷತೆಯ ನಂತರ, ವಿನಯ್ ಏಪ್ರಿಲ್ 21ರಂದು ಪತ್ನಿ ಹಿಮಾಂಶಿ ಜೊತೆ ಕಾಶ್ಮೀರಕ್ಕೆ ಹೋಗಿದ್ದರು. ಏಪ್ರಿಲ್ 22ರಂದು ಲೆಫ್ಟಿನೆಂಟ್ ವಿನಯ್ ನರ್ವಾಲರ್ರನ್ನು ಉಗ್ರರು ಗುಂಡು ಹಾರಿಸಿ ಕೊಂದರು.








