ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ.. ಉಗ್ರರ ವಿರುದ್ಧ ಪ್ರತೀಕಾರಕ್ಕೆ ಮುಂದಾದ ಸೇನೆ – ಜಮ್ಮು ಸರ್ಕಾರ ಅಲರ್ಟ್!

ನವದೆಹಲಿ : ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಪಹಲ್ಗಾಮ್​ನಲ್ಲಿ ರಕ್ತದೋಕುಳಿ ಹರಿಸಿರೋ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳೋದಕ್ಕೆ ಭಾರತೀಯ ಸೇನೆ ಮುಂದಾಗಿದ್ದು, ಉಗ್ರರನ್ನ ಸದೆಬಡೆಯೋದಕ್ಕೆ ಕೇಂದ್ರ ಸರ್ಕಾರ ತಂತ್ರ ರೂಪಿಸ್ತಿದೆ. ಈ ಹಿನ್ನೆಲೆ ಜಮ್ಮು ಸರ್ಕಾರವು ಅಲರ್ಟ್ ಆಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೂ ರಜೆಯನ್ನು ರದ್ದು ಮಾಡಲಾಗಿದೆ.

ಜಮ್ಮುವಿನ ಎಲ್ಲಾ ವೈದ್ಯಕೀಯ ಸಿಬ್ಬಂದಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದ್ದು, ತುರ್ತು ಔಷಧಿಗಳು ಮತ್ತು ಉಪಕರಣಗಳು ಸಿದ್ಧವಾಗಿರಬೇಕು. ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಬೇಕು ಎಂದು ಸೂಚಿಸಲಾಗಿದೆ. ತುರ್ತು ಸೇವೆಗಾಗಿ 0191-2582355 ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಲಾಗಿದೆ.

ಉಗ್ರರಿಗೆ ಬಿಸಿ ಮುಟ್ಟಿಸೋದಕ್ಕೆ ಭಾರತೀಯ ಸೇನೆ ಮುಂದೆ ಹಲವು ಆಯ್ಕೆ : ಪಾಕ್ ಭಾಗದಲ್ಲಿ ಎಲ್‌ಓಸಿ ಬಳಿ 42 ಉಗ್ರರ ಶಿಬಿರಗಳಿವೆ. ಇವುಗಳನ್ನ ಭಾರತದ ಸೇನೆ ಟಾರ್ಗೆಟ್ ಮಾಡುವ ಸಾಧ್ಯತೆಯಿದೆ. ಉಗ್ರರು, ಉಗ್ರರ ನಾಯಕರನ್ನೇ ಗುರಿಯಾಗಿಸಿ ಟಾರ್ಗೆಟ್ ಹತ್ಯೆಗಳನ್ನು ಮಾಡಬಹುದಾಗಿದ್ದು, ಪಾಕ್‌ನ ಉಗ್ರರು, ಉಗ್ರರ ಶಿಬಿರ ಗುರಿಯಾಗಿಸಿ ಮಿಸೈಲ್ ದಾಳಿ ನಡೆಸಬಹುದು. ಪೃಥ್ವಿ, ಅಗ್ನಿ, ಬ್ರಹ್ಮೋಸ್ ಮಿಸೈಲ್ ಬಳಸಿ ಉಗ್ರರನ್ನ ನಾಶ ಮಾಡಬಹು ಸಾಧ್ಯತೆಯಿದೆ.

ಭಾರತದ ಟಾರ್ಗೆಟ್​​ ಏನು?

ಟೆರರಿಸ್ಟ್ ಕ್ಯಾಂಪ್ ಟಾರ್ಗೆಟ್

  • ಪಾಕ್ ಭಾಗದ LOC ಬಳಿ 42 ಉಗ್ರರ ಶಿಬಿರಗಳ ಟಾರ್ಗೆಟ್​ ಮಾಡಬಹುದು

ಟಾರ್ಗೆಟ್ ಕಿಲ್ಲಿಂಗ್

  • ಉಗ್ರರು, ಉಗ್ರರ ನಾಯಕರನ್ನೇ ಗುರಿಯಾಗಿಸಿ ಟಾರ್ಗೆಟ್ ಹತ್ಯೆ ಮಾಡಬಹುದು
  •  ಇಸ್ರೇಲ್ ಈ ರೀತಿಯಾಗಿಯೇ ಟಾರ್ಗೆಟ್ ಮಾಡಿ ಉಗ್ರರನ್ನ ಹತ್ಯೆ ಮಾಡಿದೆ
  •  ಜೈಷ್ ಏ ಮೊಹಮ್ಮದ್, ಲಷ್ಕರ್ ಏ ತೊಯ್ಬಾ, ದಿ ರೆಸಿಸ್ಟೆನ್ಸ್ ಫೋರ್ಸ್ ಟಾರ್ಗೆಟ್

ಮಿಸೈಲ್ ದಾಳಿ

  • ಪಾಕ್‌ನ ಉಗ್ರರು, ಉಗ್ರರ ಶಿಬಿರ ಗುರಿಯಾಗಿಸಿ ಮಿಸೈಲ್ ದಾಳಿ ನಡೆಸಬಹುದು
  •  ಪೃಥ್ವಿ, ಅಗ್ನಿ, ಬ್ರಹ್ಮೋಸ್ ಮಿಸೈಲ್ ಬಳಸಿ ಉಗ್ರ ಶಿಬಿರಗಳನ್ನ ನಾಶಪಡಿಸಬಹುದು

ನೋ ಫಸ್ಟ್ ಪಾಲಿಸಿ ಬದಲಾವಣೆ

  • ಭಾರತ ತಾನೇ ಮೊದಲಾಗಿ ಅಣ್ವಸ್ತ್ರ ಬಳಸಲ್ಲ ಎಂಬ ನೀತಿ ಅಳವಡಿಸಿಕೊಂಡಿದೆ
  •  ಇದನ್ನು ಬದಲಾಯಿಸಿ ತಾನೇ ಮುಂದಾಗಿ ನ್ಯೂಕ್ಲಿಯರ್ ಸೇರಿ ಇತರೆ ಅಸ್ತ್ರ ಬಳಕೆ

ನೌಕಾಪಡೆಯಿಂದ ಪಾಕ್ ನೌಕೆಗಳು ಬ್ಲಾಕ್

  • ಕೆಂಪು ಸಮುದ್ರದಲ್ಲಿ ಹೌತಿ ಉಗ್ರರು ನೌಕೆಗಳ ಸಂಚಾರವನ್ನ ಬ್ಲಾಕ್ ಮಾಡಿದ್ದರು
  •  ಈಗ ಭಾರತದ ನೌಕಾಪಡೆ ಸಮುದ್ರದಲ್ಲಿ ಪಾಕ್ ನೌಕೆಗಳನ್ನು ಬ್ಲಾಕ್ ಮಾಡಬಹುದು

ಮಿಲಿಟರಿ ಅಪರೇಷನ್

  • ಎರಡೂ ಅಣ್ವಸ್ತ್ರ ರಾಷ್ಟ್ರಗಳಾಗಿದ್ದು, ಪಾಕ್, ಉಗ್ರರ ವಿರುದ್ಧ ಮಿನಿ ಯುದ್ಧದ ಸಾಧ್ಯತೆ
  •  ಯುದ್ಧದ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮರುವಶಕ್ಕೆ ಭಾರತ ಯತ್ನಿಸಬಹುದು

ಇದನ್ನೂ ಓದಿ : ಮಂಡ್ಯ ಹೈವೇಯಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಸ್ಲೀಪರ್ ಬಸ್ – 25 ಪ್ರಯಾಣಿಕರು ಜಸ್ಟ್ ಮಿಸ್!

Btv Kannada
Author: Btv Kannada

Read More