ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ಇದೀಗ ಈ ವಿಚಾರವಾಗಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಡಿಕೆಶಿ ನಾಯಕತ್ವವನ್ನು ಜನರು ಒಪ್ಪಿದ್ದಾರೆ. ದೇವೇಗೌಡರ ಫ್ಯಾಮಿಲಿಗೆ ಚನ್ನಪಟ್ಟಣದಲ್ಲಿ ಪಾಠ ಕಲಿಸಿದ್ದಾರೆ. ಗರ್ವಭಂಗ ಮಾಡ್ತೀನಿ ಅಂದ ದೇವೇಗೌಡರಿಗೆ ಈಗ ಸಂದ್ಯಾಕಾಲ. ದೇವೇಗೌಡರ ಹೋರಾಟದಲ್ಲಿ ಸಮಾಜ ಕಳಕಳಿ ಇರಲಿಲ್ಲ. ಸ್ವಾರ್ಥ ಮತ್ತು ಕುಟುಂಬವನ್ನು ಬೆಳೆಸುವ ಹೋರಾಟ ಇತ್ತು ಎಂದಿದ್ದಾರೆ.
ಒಕ್ಕಲಿಗ ನಾಯಕತ್ವವನ್ನ ಗೌಡರ ಕುಟುಂಬದಿಂದ ಜನ ಕಿತ್ಕೊಂಡಿದ್ದಾರೆ.ಕುಟುಂಬ ಬೆಳೆಸೋಕೆ ಮಾತ್ರ ಅವರಿಗೆ ಒಕ್ಕಲಿಗ ಸಮುದಾಯ ಬೇಕಿತ್ತು. ಕುಮಾರಸ್ವಾಮಿಗೆ ಅಧಿಕಾರ ದಾಹ, ಅಪ್ಪನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿ ಮಂಡ್ಯಕ್ಕೆ ಹೋಗೋ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಜೆಡಿಎಸ್ ಪಕ್ಷ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ. 30 ಸಾವಿರ ಮತಗಳಿಂದ ಗೆಲ್ತೇನೆ ಅಂತಾ ನಾನೇ ಸಿಎಂ, ಡಿಸಿಎಂಗೆ ಹೇಳಿದ್ದೆ. ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಂದಿದ್ರು. ವಿಜಯೇಂದ್ರ , ಬಿಎಸ್ವೈ ಷಡ್ಯಂತ್ರದಿಂದ ಟಿಕೆಟ್ ತಪ್ಪಿತ್ತು. ಗೆಲುವಿನ ಕ್ರೆಡಿಟ್ ಕಾಂಗ್ರೆಸ್, ಸಿಎಂ-ಡಿಸಿಎಂಗೆ ಅರ್ಪಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ : ಉಪಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ – ಡಿಕೆಶಿ ರಿಯಾಕ್ಷನ್..!