ಬೆಂಗಳೂರು : ಇಂದು ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ದೊರೆತಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಇದು ನಮ್ಮ ಗ್ಯಾರಂಟಿಗೆ ಸಿಕ್ಕಿರುವ ಗೆಲುವು. ಕರ್ನಾಟಕದ ಮೂರೂ ಭಾಗದಿಂದ ಜನಾದೇಶ ಸಿಕ್ಕಿದೆ. ಚನ್ನಪಟ್ಟಣದ ಮತದಾರರು NDA ಪಾರ್ಟನರ್ಗೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಹೆಚ್ಡಿಕೆ ಪುತ್ರ, ಬೊಮ್ಮಾಯಿ ಪುತ್ರ ಇಬ್ಬರೂ ಸೋತಿದ್ದಾರೆ. ಬಿಜೆಪಿ-ಜೆಡಿಎಸ್ ಸುಳ್ಳು ಆರೋಪಕ್ಕೆ ಉತ್ತರ ಸಿಕ್ಕಿದೆ. ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಜನರು ಉತ್ತರ ಕೊಟ್ಟಿದ್ದಾರೆ.
ಅಭಿವೃದ್ಧಿ ಕಡೆ ಗಮನ ಕೊಡಿ ಅನ್ನೋ ಸಂದೇಶ ಇದು. ಮಾಜಿ ಪ್ರಧಾನಿ, ಮಾಜಿ ಸಿಎಂಗಳ ಆರೋಪಕ್ಕೂ ಉತ್ತರ ಸಿಕ್ಕಿದೆ. ಇದು ಸಮಗ್ರ ಕರ್ನಾಟಕದ ಜನರ ತೀರ್ಪು. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : 30 ವರ್ಷಗಳ ಬಳಿಕ ಶಿಗ್ಗಾಂವಿ ಕಾಂಗ್ರೆಸ್ ತೆಕ್ಕೆಗೆ.. ಯಾಸಿರ್ ಪಠಾಣ್ ಜಯಭೇರಿ – ಮುಗ್ಗರಿಸಿದ ಭರತ್..!