ಕಲಬುರಗಿ : ಹಳೆ ವೈಷಮ್ಯಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ಪಟ್ಟಣದಲ್ಲಿ ನಡೆದಿದೆ. ಕಮಲಾಪುರ ನಿವಾಸಿ ಹನೀಫ್ ಸಾಬ್ ನೈಕೋಡಿ (70) ಮೃತ ದುರ್ದೈವಿ.

ಹನೀಫ್ ಸಾಬ್ ನೈಕೋಡಿ ಮೊಹರಂ ಹಬ್ಬದಲ್ಲಿ ಪೀರ್ ಹಿಡಿಯುತ್ತಿದ್ದ, ಈ ವಿಚಾರಕ್ಕೆ ಗಲಾಟೆ ನಡೆದಿದೆ. ರಿಜ್ವಾನ್ ಹಾಗೂ ಹನೀಫ್ ಸಾಬ್ ಮಧ್ಯೆ ಪೀರ್ ಹಿಡಿಯುವ ವಿಚಾರಕ್ಕೆ ಕಲಹ ನಡೆದಿದ್ದು, ಕಲಹ ಬಗೆಹರಿಯದ ಹಿನ್ನಲೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದರು. ಈ ವೇಳೆ ರಿಜ್ವಾನ್ನಿಂದ ಹನಿಫ್ಸಾಬ್ನ ಹೊಟ್ಟೆಗೆ ಚಾಕು ಇರಿದಿರುವ ಆರೋಪ ಕೇಳೀಬಂದಿದೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹನೀಫ್ ಸಾಬ್ ನೈಕೋಡಿ ಮೃತಪಟ್ಟಿದ್ದಾನೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಘಾರ್ಗಾ ಚಿತ್ರದ ‘ನೀನು ನನಗೆ’ ರೊಮ್ಯಾಂಟಿಕ್ ಹಾಡು ಬಿಡುಗಡೆ!
Author: Btv Kannada
Post Views: 198







