ಚಿಕ್ಕೋಡಿ : ಮಧ್ಯರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ದರೋಡೆಕೋರರು ಹಲ್ಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ನಿಪ್ಪಾಣಿ ಶಹರದಲ್ಲಿ ನಡೆದಿದೆ. ಕೈಯಲ್ಲಿ ಲಾಂಗು ಮಚ್ಚು ಹಿಡಿದಿದ್ದ ಖದೀಮರು, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ.

4 ಮಂದಿ ದರೋಡೆಕೋರರು ರಾತ್ರಿ ಮನೆಗಳ್ಳತನ ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸ್ ಗಸ್ತಿನ ವಾಹನ ಕಂಡು ದರೋಡೆಕೋರರು ದಿಕ್ಕಾಪಾಲಾಗಿ ಓಡಿದ್ದು, ಓರ್ವ ಪೋಲಿಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಕಳ್ಳರು ಪರಾರಿಯಾಗಿದ್ದಾರೆ.

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ದರೋಡೆಕೋರರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಜೈಲಿನಲ್ಲಿ ಮಾದಕ ವಸ್ತುಗಳಿಗಾಗಿ ಕಾದಾಟ – ಜೈಲರ್ ಸೇರಿ 3 ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕೈದಿಗಳು!
Author: Btv Kannada
Post Views: 219







