ಬೆಂಗಳೂರು : ಮನೆ ಬಳಿ ಗಲಾಟೆ ಮಾಡ್ಬೇಡಿ ಅಂದಿದ್ದಕ್ಕೆ ಪುಂಡರು ದಾಂಧಲೆ ಮಾಡಿರುವ ಘಟನೆ ನಗರದ ಬಿಳೆಕಹಳ್ಳಿ 7ನೇ ಕ್ರಾಸ್ನಲ್ಲಿ ನಡೆದಿದೆ. ಪುಂಡರು 4 ಬೈಕ್, ಹೂವಿನ ಪಾಟ್ಗಳನ್ನು ಪುಡಿ ಪುಡಿ ಮಾಡಿದ್ದಾರೆ.

ನಿತಿನ್ ಎಂಬಾತನ ಗ್ಯಾಂಗ್ ಪ್ರತಿದಿನ ಈ ಪ್ರದೇಶಕ್ಕೆ ಬಂದು ಸಿಗರೇಟ್ ಸೇದುತ್ತಾ, ಮದ್ಯಪಾನ ಮಾಡುತ್ತಾ, ಮಧ್ಯ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪಟಾಕಿ ಹೊಡೆಯುತ್ತಾ ಸಾರ್ವಜನಿಕರಿಗೆ ಹಿಂಸೆ ನೀಡುತ್ತಿದ್ದರು. ಈ ಪುಂಡರ ಉಪಟಳದ ಬಗ್ಗೆ ಸ್ಥಳೀಯರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಘಟನೆ ನಡೆದ ಶನಿವಾರ ರಾತ್ರಿ ಕೂಡ ಈ ಗ್ಯಾಂಗ್ ರಸ್ತೆಯಲ್ಲಿ ಬೈಕ್‌ಗಳನ್ನು ಅಡ್ಡ ಹಾಕಿ ಸಮಸ್ಯೆ ಸೃಷ್ಟಿಸಿತ್ತು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅರುಣ್ ಮನೆ ಮುಂದೆ ದಾಂಧಲೆ ಮಾಡಿದ್ದು, ಅರುಣ್ ಬೈಕ್ ಸೇರಿ ಸ್ಥಳೀಯರ ಬೈಕ್ಗಳ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಪುಂಡರ ಅಟ್ಟಹಾಸ ಸ್ಥಳೀಯರ ಮೊಬೈಲ್ ಹಾಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಾಟ ಯಶಸ್ವಿ!







