ನಮ್ಮ‌ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಾಟ ಯಶಸ್ವಿ!

ಬೆಂಗಳೂರು : ನಮ್ಮ ಮೆಟ್ರೋ ಮೂಲಕ ಮತ್ತೊಮ್ಮೆ ಯಶಸ್ವಿಯಾಗಿ ಜೀವಂತ ಹೃದಯ ಸಾಗಾಟ ಮಾಡಲಾಗಿದೆ. ಎರಡು ಆಸ್ಪತ್ರೆಗಳ ಸಹಯೋಗದಲ್ಲಿ, ಅತ್ಯಂತ ಸೂಕ್ಷ್ಮವಾದ ಜೀವಂತ ಮಾನವ ಹೃದಯವನ್ನು ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಸಾಗಿಸಲಾಗಿದೆ.

ಇದು ನಮ್ಮ ಮೆಟ್ರೋ ಮೂಲಕ ನಡೆದ ಐದನೇ ಯಶಸ್ವಿ ಮಾನವ ಅಂಗಾಂಗ ಸಾಗಾಟವಾಗಿದೆ. ಆಸ್ಟರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಕ್ಕೆ ಜೀವಂತ ಹೃದಯ ಶಿಫ್ಟ್ ಆಗಿದೆ, ಸಂಜೆ 07.26 ರಿಂದ 7.39 ಅವಧಿಯಲ್ಲಿ ಹೃದಯ ಸಾಗಾಟಕ್ಕೆ ಮೆಟ್ರೋ ಬಳಕೆ ಮಾಡಲಾಗಿದೆ. ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಯಲ್ಲಿ ಗಂಟೆಗಳ ಕಾಲ ತೆಗೆದುಕೊಳ್ಳಬಹುದಾದ ಪ್ರಯಾಣವನ್ನು ಅಧಿಕಾರಿಗಳು ಕೇವಲ 13 ನಿಮಿಷಗಳಲ್ಲಿ ಯಶಸ್ವಿಗೊಳಿಸಿದ್ದಾರೆ.

ಈ ಪ್ರಮುಖ ಕಾರ್ಯಾಚರಣೆಯಲ್ಲಿ ಆರು ಜನರ ವೈದ್ಯರ ತಂಡವು ಭಾಗವಹಿಸಿತ್ತು. ಅವರಿಗೆ ಮೆಟ್ರೋ ಭದ್ರತಾ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದರು. ಮೆಟ್ರೋ ಮೂಲಕ ಬೊಮ್ಮಸಂದ್ರ ನಿಲ್ದಾಣ ತಲುಪಿದ ನಂತರ, ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಹೃದಯವನ್ನು ಶಸ್ತ್ರಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಸುರಕ್ಷಿತವಾಗಿ ರವಾನಿಸಲಾಯಿತು.

ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ – ರಾಜ್ಯದ ಪ್ರಮುಖ 5 ವಿಚಾರಗಳ ಬಗ್ಗೆ ಚರ್ಚೆ!

Btv Kannada
Author: Btv Kannada

Read More