ಮೋದಿ-ನಿತೀಶ್ ಕುಮಾರ್ ಜೋಡಿಗೆ MGB ಧೂಳೀಫಟ.. 196 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ NDA ಮೈತ್ರಿಕೂಟ!

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ NDA ಮೈತ್ರಿಕೂಟವು 196 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ವಿರೋಧ ಪಕ್ಷಗಳಾದ ಮಹಾಘಟಬಂಧನ್ (MGB) ಅನ್ನು ಧೂಳೀಪಟ ಮಾಡಿದೆ. ಎನ್‌ಡಿಎ ಎದುರು ಮಹಾಘಟಬಂಧನ್ ಮೈತ್ರಿಕೂಟವು ಕೇವಲ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತೀವ್ರ ಹಿನ್ನಡೆ ಅನುಭವಿಸಿದೆ. NDA – 196, MGB – 41, JSP – 0, ಮತ್ತು ಇತರರು (OTH) – 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಫಲಿತಾಂಶದ ಮೂಲಕ ಬಿಹಾರದಲ್ಲಿ ಮತ್ತೊಮ್ಮೆ ನಿತೀಶ್ ಕುಮಾರ್ ಆಡಳಿತಕ್ಕೆ ಮತದಾರರು ಸ್ಪಷ್ಟವಾಗಿ ಕೈ ಹಿಡಿದಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವು ಅಂತಿಮವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಚುನಾವಣಾ ಪೂರ್ವದಲ್ಲಿ ನಡೆಸಿದ ಭಾರೀ ಮತ್ತು ಸಂಘಟಿತ ಪ್ರಚಾರವೇ ಮಹಾಘಟಬಂಧನ್ (MGB) ಅನ್ನು ಮಣಿಸಲು ಪ್ರಮುಖ ಕಾರಣವಾಗಿದೆ.

NDA ಮೈತ್ರಿಕೂಟವು ಬಿಹಾರದಾದ್ಯಂತ ಒಟ್ಟು ಬರೋಬ್ಬರಿ 565 ಚುನಾವಣಾ ರ್ಯಾಲಿಗಳನ್ನು ನಡೆಸಿತ್ತು. 565 ರ್ಯಾಲಿ ಮಾಡಿ ಈ ಬೃಹತ್ ಪ್ರಚಾರದ ಮೂಲಕ ಪ್ರತಿ ಮತದಾರರನ್ನು ತಲುಪಲು ಯಶಸ್ವಿಯಾಗಿದೆ. ಈ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತ್ಯೇಕ ಸಮಾವೇಶಗಳನ್ನು ನಡೆಸುವ ಮೂಲಕ ಮತದಾರರ ಮೇಲೆ ನೇರ ಪ್ರಭಾವ ಬೀರಿದರು. ಕೇವಲ ಮೋದಿ ಮತ್ತು ನಿತೀಶ್ ಮಾತ್ರವಲ್ಲದೆ, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಬಿಜೆಪಿಯ ಹಲವು ಪ್ರಮುಖ ನಾಯಕರು ರಾಜ್ಯಾದ್ಯಂತ ರ್ಯಾಲಿಗಳನ್ನು ನಡೆಸಿದ್ದಾರೆ.

ರಾಷ್ಟ್ರೀಯ ಜನತಾ ದಳ (RJD) ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟವು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಯುವ ನಾಯಕ ತೇಜಸ್ವಿ ಯಾದವ್ ಅವರು ಉದ್ಯೋಗ ಮತ್ತು ಬದಲಾವಣೆಯ ಭರವಸೆಯೊಂದಿಗೆ ನಡೆಸಿದ ತಂತ್ರಗಾರಿಕೆಗಳು ಮತದಾರರನ್ನು ಆಕರ್ಷಿಸುವಲ್ಲಿ ವಿಫಲವಾದವು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆಸಿದ ಜಂಟಿ ರ್ಯಾಲಿಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಮತವಾಗಿ ಪರಿವರ್ತನೆಯಾಗಲಿಲ್ಲ.

ಇದನ್ನೂ ಓದಿ : ಬಿಹಾರದಲ್ಲೂ ವೋಟ್ ಚೋರಿ ಆಗಿದೆ, ಆದ್ರೆ ಜನರು ಕೊಟ್ಟಿರುವ ತೀರ್ಪು ಒಪ್ಪಿಕೊಳ್ಳಬೇಕು – ಸಿಎಂ ಸಿದ್ದರಾಮಯ್ಯ!

Btv Kannada
Author: Btv Kannada

Read More