‘ಮಾರ್ಕ್’ ಶೂಟಿಂಗ್ ಕಂಪ್ಲೀಟ್.. ಪೋಸ್ಟ್ ಪ್ರೊಡಕ್ಷನ್ನಲ್ಲಿ ಕಿಚ್ಚನ ಚಿತ್ರ – ಡಿ.25ಕ್ಕೆ ಸಿನಿಮಾ ಎಂಟ್ರಿ ಕನ್ಫರ್ಮ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ‘ಮಾರ್ಕ್’ ಸಿನಿಮಾದ ಟೀಸರ್ ಈಗಾಗಲೇ ದಾಖಲೆ‌ ಬರೆದಿದೆ. ಕಿಚ್ಚನ ಆಕ್ಷನ್ ಖದರ್ ನೋಡಿ ಥ್ರಿಲ್ಲರ್ ಆಗಿರುವ ಸುದೀಪಿಯನ್ಸ್ ಗೆ ಚಿತ್ರತಂಡ ಈಗ ಮತ್ತೊಂದು ಕ್ರೇಜಿ ಅಪ್ ಡೇಟ್ ಕೊಟ್ಟಿದೆ.

ಮಾರ್ಕ್ ಶೂಟಿಂಗ್ ಮುಕ್ತಾಯ

ಮಾರ್ಕ್ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಸಿ‌ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಸಿಕೊಂಡಿದೆ.

ಡಿಸೆಂಬರ್ 25ಕ್ಕೆ ಮಾರ್ಕ್ ಎಂಟ್ರಿ ಖಚಿತ

‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ಮೋಡಿ ಮಾಡಿತ್ತು. ಈಗ ಮತ್ತೆ ಅವರಿಬ್ಬರು ‘ಮಾರ್ಕ್’ ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ‘ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ‘ಮಾರ್ಕ್’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

‘ಮಾರ್ಕ್’ ಸಿನಿಮಾಗೆ ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರವನ್ನು ಸುದೀಪ್ ಮಾಡಿದ್ದಾರೆ.
‘ಸತ್ಯಜ್ಯೋತಿ ಫಿಲ್ಮ್ಸ್’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜತೆಯಾಗಿ ಈ ‘ಮಾರ್ಕ್’ ಚಿತ್ರವನ್ನು ನಿರ್ಮಿಸಿವೆ.

ಇದನ್ನೂ ಒದಿ : ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ ಪ್ರಜೆ ಬನ್ನೇರುಘಟ್ಟ ಪೊಲೀಸ್ ವಶಕ್ಕೆ!

Btv Kannada
Author: Btv Kannada

Read More