ಬೆಂಗಳೂರು : ವೀಸಾ ಮತ್ತು ಪಾಸ್‌ಪೋರ್ಟ್‌ಗಳ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ ದೇಶದ ಮಹಿಳಾ ಪ್ರಜೆಯನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಕ್ರಮ ನಿವಾಸಿ ಮಹಿಳೆಯನ್ನು ಅಧಿಕಾರಿಗಳು ಅವರ ಸ್ವದೇಶಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ನೈಜೀರಿಯಾದ ಮಹಿಳೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು. ಬನ್ನೇರುಘಟ್ಟ ಪೊಲೀಸರು ಈ ಮಹಿಳೆಯನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ, ಅವರನ್ನು ವಶಕ್ಕೆ ಪಡೆದರು.

ಬನ್ನೇರುಘಟ್ಟ ಪೊಲೀಸರು ಅಕ್ರಮವಾಗಿ ನೆಲೆಸಿದ್ದ ಈ ಮಹಿಳೆಯನ್ನು ವಿದೇಶಿಯರ ನೋಂದಣಿ ಕಚೇರಿ (FRRO) ವಶಕ್ಕೆ ನೀಡಿದ್ದಾರೆ. ಕಾನೂನು ಪ್ರಕ್ರಿಯೆಗಳ ಭಾಗವಾಗಿ, ಪೊಲೀಸರು ಈ ನೈಜೀರಿಯಾ ಪ್ರಜೆಯನ್ನು ಇಮಿಗ್ರೇಶನ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಇದೀಗ, ನೈಜೀರಿಯಾ ಪ್ರಜೆಯನ್ನು ಅವರ ಸ್ವದೇಶಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅವರನ್ನು ಅವರ ದೇಶಕ್ಕೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ : ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡ್ತೀನಿ – ಕೆ.ಎನ್ ರಾಜಣ್ಣ!







