ಕೊಲ್ಲೂರು ದೇಗುಲದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ವಂಚನೆ – ಕೇಸ್ ದಾಖಲು!

ಉಡುಪಿ : ಕೊಲ್ಲೂರು ದೇವಳದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೊಠಡಿ ಕಾಯ್ದಿರಿಸುವ ನೆಪದಲ್ಲಿ ಭಕ್ತರಿಗೆ ವಂಚಿಸಿದ್ದು, ಈ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚಕರು ಕರ್ನಾಟಕ ಟೆಂಪಲ್ ಅಕಮೊಡೇಷನ್ ಎಂಬ ಅಧಿಕೃತ ವೆಬ್‌ಸೈಟ್‌ನ ಹೆಸರಿನಲ್ಲಿಯೇ ಅನಧಿಕೃತ ನಕಲಿ ವೆಬ್‌ಸೈಟ್ ಅನ್ನು ರಚಿಸಿದ್ದಾರೆ. ದೇಗುಲದ ಲಲಿತಾಂಬಿಕ ಅತಿಥಿಗೃಹದ ಕೊಠಡಿಗಳನ್ನು ಕಾಯ್ದಿರಿಸುವುದಾಗಿ ಭಕ್ತರನ್ನು ನಂಬಿಸಿ ಮೋಸ ಮಾಡಿದ್ದಾರೆ. ಕೊಠಡಿ ಕಾಯ್ದಿರಿಸಲು ಫೋನ್ ಪೇ ಅಥವಾ ಕ್ಯೂಆರ್ ಕೋಡ್ ಮೂಲಕ ಹಣವನ್ನು ಪಡೆದು, ನಂತರ ನಕಲಿ ರಶೀದಿ ನೀಡಿ ವಂಚಿಸಿದ್ದಾರೆ.

ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮಕ್ಕಾಗಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಶೆಟ್ಟಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಇದನ್ನೂ ಓದಿ : ಡಿಸಿಎಂ ಡಿಕೆಶಿ ಭೇಟಿಯಾದ ರಿಯಲ್ ಸ್ಟಾರ್ ಉಪೇಂದ್ರ!

Btv Kannada
Author: Btv Kannada

Read More