ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡುವ ವಿಚಾರಣೆಯನ್ನು 64ನೇ ಸಿಸಿಎಚ್ ನ್ಯಾಯಾಲಯ ನವೆಂಬರ್ 10ಕ್ಕೆ ಮುಂದೂಡಿದೆ.

ಜೈಲು ಸೇರಿರುವ ದರ್ಶನ್ ಸೇರಿದಂತೆ ಆರೋಪಿಗಳು ಇಂದು ಬೆಂಗಳೂರು 64ನೇ ಸಿಸಿಎಚ್ ಕೋರ್ಟ್ ಹಾಜರಾದರು. ಖುದ್ದು ಹಾಜರಾಗಲು ಕೋರ್ಟ್ ಸೂಚಿಸಿತ್ತು. ಇದರಂತೆ ಭಾರಿ ಬಿಗಿ ಭದ್ರತೆಯೊಂದಿಗೆ ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಸೆಷನ್ ಕೋರ್ಟ್‌ಗೆ ಹಾಜರಾದರು.

ಆರೋಪಿಗಳು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಎಲ್ಲಾ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆ ಟ್ರಯಲ್ ಪ್ರಕ್ರಿಯೆ ಶುರುವಾಗಲಿದೆ. ನವೆಂಬರ್ 10ರಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಟ್ರಯಲ್ ಆರಂಭವಾಗಲಿದೆ.
ನ್ಯಾಯಾಧೀಶ ಐಪಿ ನಾಯಕ್ ಅವರು ಪ್ರಕರಣದ ದೋಷಾರೋಪ ಪಟ್ಟಿಯನ್ನು ಓದಿದ್ದಾರೆ. ಎಲ್ಲಾ ಆರೋಪಿಗಳಿಗೂ ಜಡ್ಜ್ ಏಕಕಾಲಕ್ಕೆ ಆರೋಪಪಟ್ಟಿ ಓದಿ ಹೇಳಿದ್ದು, ಈ ವೇಳೆ ಆರೋಪಿಗಳು ನ್ಯಾಯಮೂರ್ತಿಗಳಿಗೆ ಇದೆಲ್ಲಾ ಸುಳ್ಳು ಎಂದು ಉತ್ತರಿಸಿದ್ದಾರೆ. ಈ ಹಿನ್ನಲೆ ದರ್ಶನ್ ಸೇರಿದಂತೆ 17 ಮಂದಿಯ ವಿಚಾರಣೆಯನ್ನು ಕೋರ್ಟ್ ನವೆಂಬರ್ 10ಕ್ಕೆ ಮುಂದೂಡಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಸ್ನೇಹಿತರಿಂದಲೇ ಸ್ನೇಹಿತನ ಬರ್ಬರ ಹತ್ಯೆ – ಕಲ್ಲಿನಿಂದ ಜಜ್ಜಿ ಯುವಕನ ಕೊಲೆ!







