ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹುಚ್ಚಾಟ ಮಿತಿ ಮೀರಿದೆ. ಬ್ಯಾಡರಹಳ್ಳಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಧ್ರಳ್ಳಿ ಪ್ರದೇಶದಲ್ಲಿ ನಿಲ್ಲಿಸಿದ್ದ ಹಲವು ಕಾರು ಮತ್ತು ಆಟೋಗಳ ಗ್ಲಾಸ್‌ಗಳನ್ನು ಪುಡಿ ಮಾಡಿ ಪುಂಡರು ಹುಚ್ಚಾಟ ಮೆರೆದಿದ್ದಾರೆ.

ಈ ಘಟನೆ ಬ್ಯಾಡರಹಳ್ಳಿಯ ಅಂಧ್ರಳ್ಳಿಯಲ್ಲಿ ನಡೆದಿದ್ದು, ಐವರು ಯುವಕರು ನಿಂತಿದ್ದ ವಾಹನಗಳ ಗ್ಲಾಸ್‌ಗಳನ್ನು ಒಡೆದು ಹಾಕಿದ್ದಾರೆ. ಪುಂಡರ ಅಟ್ಟಹಾಸ ಗಮನಿಸಿದ ಸ್ಥಳೀಯರು ಐವರಲ್ಲಿ ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ತನಿಖೆಯಲ್ಲಿ ಸ್ಪೋಟಕ ವಿಚಾರಗಳು ಬಯಲು!
Author: Btv Kannada
Post Views: 260







