ಡಿಕೆಶಿಯೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ.. ನವೆಂಬರ್ 21-27 ಡೆಡ್​ಲೈನ್ – ಮುಂಬೈನಲ್ಲಿ ನೊಣವಿನ ಕೆರೆ ಶ್ರೀ, ದ್ವಾರಕನಾಥ್​ ಜೊತೆ ‘ಬಂಡೆ’!

ಬೆಂಗಳೂರು : ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗನಿಂದಲೂ ಆಗಾಗ್ಗೆ ಚರ್ಚೆಗೊಳಪಡುತ್ತಿರುವ ವಿಚಾರ. ಇತ್ತೀಚೆಗೆ ರಾಜಕೀಯ ರಂಗದಲ್ಲಿ ಇದು ಮತ್ತೆ ಚರ್ಚೆಗೆ ಬಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನವೆಂಬರ್​ ಕ್ರಾಂತಿ ನಡೆಯಲಿದೆ, ಡಿಕೆಶಿಯವರು ಸಿಎಂ ಆಗ್ತಾರೆ ಅನ್ನೋ ಸುದ್ದಿ ಹರಿದಾಡುತ್ತಲೇ ಇದೆ. ಹಾಗಾದರೆ ಕರ್ನಾಟಕದ ಮುಂದಿನ ಸಿಎಂ ಯಾರು? ಸಿದ್ದರಾಮಯ್ಯ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿದೆ. ಇದೀಗ BTV ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪಟ್ಟಾಭಿಷೇಕದ ಇಂಚಿಂಚೂ ಮಾಹಿತಿಯನ್ನು ಬಯಲು ಮಾಡ್ತಿದೆ.

ಹೌದು.. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಅನ್ನೋದು ಇವತ್ತಿನ ಒಂದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ನವೆಂಬರ್ 21 – ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ, ನವೆಂಬರ್ 24 – ಚತುರ್ಥಿ, ನವಂಬರ್ 27 – ಸಪ್ತಮಿ ಹಾಗೂ ಸೂರ್ಯ ವೃತ. ಈ 3 ದಿನಗಳಲ್ಲಿ ಒಂದರಲ್ಲಿ ರಾಜ್ಯದ ರಾಜಕಾರಣ ಬದಲಾವಣೆ ಆಗಲಿದೆ. ರಾಜ್ಯ ರಾಜಕಾರಣ ಚೇಂಜ್ ಬಗ್ಗೆ ಇಬ್ಬರು ಮಹಾನ್ ಜ್ಯೋತಿಷಿಗಳು ಹೇಳಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​​ ಪಟ್ಟಾಭಿಷೇಕ ಆಗೋ ಬಗ್ಗೆ ಮಹಾನ್ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ನೊಣವಿನ ಕೆರೆ ಅಜ್ಜಯ್ಯ ಗುರೂಜಿ ಹೇಳಿರುವ ಪ್ರಕಾರ ನ.24ರಂದು ಡಿಕೆಶಿ ಸಿಎಂ ಆಗಲಿದ್ದಾರೆ. ಖ್ಯಾತ ಗುರೂಜಿ ದ್ವಾರಕನಾಥ್ ಹೇಳಿರುವ ಪ್ರಕಾರ ನ.21ರಂದು ಡಿಕೆಶಿ ಸಿಎಂ ಆಗಲಿದ್ದಾರೆ. ಇಬ್ಬರು ಜ್ಯೋತಿಷಿಗಳು ಸೇರಿ ನವೆಂಬರ್ 27 ರಂದು ಎರಡನೇ ಡೇಟ್ ಕೊಟ್ಟಿದ್ದಾರೆ. ಡಿಕೆಶಿ 21 ರಿಂದ 27ರೊಳಗೆ ಸಿಎಂ ಆಗಲಿದ್ದಾರೆ ಎಂಬುದು ಈ ಇಬ್ಬರು ಜ್ಯೋತಿಷಿಗಳ ಹೇಳಿಕೆಯಾಗಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ನವೆಂಬರ್​​​ ಕ್ರಾಂತಿ, ಡಿಕೆಶಿಗೆ ಪಟ್ಟಾಭಿಷೇಕ ಫಿಕ್ಸ್​ ಆಗಿದೆ. ಡಿಕೆಶಿ ಸಿಎಂ ಆಗೋ ಬಗ್ಗೆ ನಿನ್ನೆ ಮುಂಬೈನಲ್ಲಿ ನೊಣವಿನಕೆರೆ ಶ್ರೀಗಳು ಸುಳಿವು ಕೊಟ್ಟಿದ್ದಾರೆ. BTV ಬಳಿ ಮಾತ್ರ ನೊಣವಿನಕೆರೆ ಶ್ರೀ ಮುಂಬೈ ಪ್ರವಾಸದಲ್ಲಿರುವ ಫೋಟೋ ಇದೆ. ಅಷ್ಟೇ ಅಲ್ಲ ಮುಂಬೈನಲ್ಲಿ ದ್ವಾರಕನಾಥ್ ಗುರೂಜಿ ಜೊತೆ ಇರುವ ಡಿಕೆಶಿ ಫೋಟೋ ಕೂಡ ಇದೆ. ಇದು ಸುಶೀಲ್ ಕುಮಾರ್ ಶಿಂಧೆ ಕುಟುಂಬದ ವಿವಾಹದಲ್ಲಿ ಪಾಲ್ಗೊಂಡಿರುವ ಫೋಟೋ. ಇನ್ನು ಡಿಕೆಶಿ ಬ್ಯುಸಿನೆಸ್ ಫ್ರೆಂಡ್​ಗಳು, ಶ್ರೀಮಂತ ಫ್ರೆಂಡ್ಸ್​ ಮತ್ತು ಹಲವು ಕ್ಲಾಸ್​ ಮೆಟ್​ಗಳು, ನವೆಂಬರ್ 20ರಂದೇ ಬೆಂಗಳೂರಿಗೆ ಬರುತ್ತಿದ್ದಾರೆ. ಅಮೆರಿಕಾ, ಗಲ್ಫ್​ ರಾಷ್ಟ್ರಗಳು, ಸಿಂಗಾಪುರ್, ಮಲೇಷ್ಯಾ, ಆಫ್ರಿಕಾದಿಂದ ಬರ್ತಿದ್ದಾರೆ. ಎಲ್ಲ ವಿದೇಶಗಳಿಂದ ಡಿಕೆಶಿ ಸ್ನೇಹಿತರು ಬರುತ್ತಿದ್ದಾರೆ, ಟಿಕೆಟ್ ಬುಕ್ ಆಗಿದೆ. ಬೆಂಗಳೂರಿನ 3 ಫೈವ್ ಸ್ಟಾರ್ ಹೋಟೆಲ್​​ಗಳಲ್ಲಿ ರೂಮ್​ಗಳು ಕೂಡ ಬುಕ್ ಆಗಿದೆ. ಹಾಗಾದರೆ ಏನಿದರರ್ಥ?

ನ.25ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಲಿದೆ. 1 ಲಕ್ಷ ಜನ ಸೇರುವ ಬೃಹತ್ ವೇದಿಕೆ ಸಜ್ಜಾಗುತ್ತಿದೆ, ಮೊನ್ನೆ ಭೂಮಿ ಪೂಜೆ ಆಗಿದೆ. ಡಿಕೆಶಿ ಆಪ್ತರ ಪ್ರಕಾರ ನವೆಂಬರ್ 21 ರಿಂದ 27ರ ಒಳಗೆ ಅವರು ಸಿಎಂ ಆಗುತ್ತಾರೆ. ಇದು ಡಿಸಿಎಂ ಡಿಕೆ ಶಿವಕುಮಾರ್​ ಆಪ್ತರ ಹೇಳಿಕೆಯಾಗಿದೆ. ಇನ್ನು ಸಿದ್ದರಾಮಯ್ಯ ಆಪ್ತರು ಹೇಳುವ ಪ್ರಕಾರ 8 ಮಂದಿ ಮಂತ್ರಿಗಳು ಡ್ರಾಪ್ ಆಗುತ್ತಾರೆ. ನವೆಂಬರ್ 27ಕ್ಕೆ ಸಚಿವ ಸಂಪುಟ ಪುನಾರಚನೆ ಆಗಲಿದೆ, ಆರ್​.ಬಿ ತಿಮ್ಮಾಪುರ, ರಹೀಮ್ ಖಾನ್ ಸೇರಿ 8 ಮಂದಿ ಡ್ರಾಪ್ ಆಗುತ್ತಾರೆ. ಮಾಗಡಿ ಬಾಲಕೃಷ್ಣ, ಲಕ್ಷ್ಮಣ ಸವದಿ, ನರೇಂದ್ರಸ್ವಾಮಿ, ತನ್ವೀರ್ ಸೇಠ್ ಸೇರಿದಂತೆ 8 ಮಂತ್ರಿಗಳು ಕ್ಯಾಬಿನೆಟ್​​ಗೆ ಬರುತ್ತಾರೆ. ಹಾಲಿ ಇರುವ ಮಂತ್ರಿಗಳಲ್ಲಿ ಮೇಜರ್ ಚೇಂಜಸ್ ಇರುವುದಿಲ್ಲ. ಯುಟಿ ಖಾದರ್ ಬದಲು ಟಿಬಿ ಜಯಚಂದ್ರ ಸ್ಪೀಕರ್ ಆಗುತ್ತಾರೆ, ಅಥವಾ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಸ್ಪೀಕರ್ ಆಗುತ್ತಾರೆ. ಯುಟಿ ಖಾದರ್​ಗೆ ಹೋಂ ಮಿನಿಸ್ಟ್ರಿ ಕಾತೆ ಕೊಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಹೋಂ ಮಿನಿಸ್ಟರ್ ಪರಮೇಶ್ವರ್​ ರವಿನ್ಯು ಮಿನಿಸ್ಟರ್ ಆಗಲಿದ್ದಾರೆ. ನರೇಂದ್ರಸ್ವಾಮಿಗೆ ಅರಣ್ಯ ಖಾತೆ, ಲಕ್ಷ್ಮಣ ಸವದಿ ಸಹಕಾರ ಸಚಿವರಾಗಲಿದ್ದಾರೆ, ಬೆಳಗಾವಿ ಸಾಹುಕಾರ್ ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ. ರಾಮಲಿಂಗಾರೆಡ್ಡಿ ಲೋಕೋಪಯೋಗಿ ಮಿನಿಸ್ಟರ್ ಆಗಲಿದ್ದಾರೆ. ಹೆಚ್ ಸಿ ಬಾಲಕೃಷ್ಣ ಸಾರಿಗೆ ಮಂತ್ರಿ ಆಗಲಿದ್ದಾರೆ, ತನ್ವೀರ್ ಸೇಠ್​ಗೆ ವಸತಿ ಖಾತೆ ಸಿಗಲಿದೆ. ಬಳ್ಳಾರಿಯ ನಾಗೇಂದ್ರ ಮತ್ತೆ ಮಿನಿಸ್ಟರ್ ಅಗಲಿದ್ದಾರೆ ಎಂಬುವುದು ಸಿದ್ದರಾಮಯ್ಯ ಬಣದ ಮಾತು.

ಇದು ಬಿಟ್ಟರೆ ಸಿಎಂ ಸಿಎಂ ಆಗಿಯೇ ಮುಂದುವರೆಯಲಿದ್ದಾರೆ. ಡಿಸಿಎಂ ಡಿಸಿಎಂ ಆಗಿ ಮುಂದುವರೆಯಲಿದ್ದಾರೆ, ಇದು ಸಿದ್ದರಾಮಯ್ಯ ಕಡೆಯ ಮಾತು. ಇಂದು ಬೆಳಗ್ಗೆ 15 ನಿಮಿಷಗಳ ಕಾಲ ಡಿಕೆಶಿ – ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ನ.15-20ರೊಳಗೆ ಎಲ್ಲ ಸಂಪುಟದ ಸಚಿವರು, ಶಾಸಕರು, ಸಿಎಂ, ಡಿಸಿಎಂ ದೆಹಲಿಯಲ್ಲಿರ್ತಾರೆ. ಡಿಸಿಎಂ ಡಿಕೆ ಶಿವಕುಮಾರ್​ಗೆ ಡಿ – ಡೇ ಅಂದರೆ ನವೆಂಬರ್ 21 ರಿಂದ ನವೆಂಬರ್​ 27. ಈ ದಿನಾಂಕದಲ್ಲಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆದ್ರೆ ಆಗ್ತಾರೆ.

ಇದನ್ನೂ ಓದಿ : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ತನಿಖೆಯಲ್ಲಿ ಸ್ಪೋಟಕ ವಿಚಾರಗಳು ಬಯಲು!

 

 

 

Btv Kannada
Author: Btv Kannada

Read More