ಬಿಗ್ಬಾಸ್ನಲ್ಲಿ ಸ್ಪರ್ಧಿಗಳ ನಡುವೆ ಜಗಳ, ಕಿರಿಕ್, ಮಾರಾಮಾರಿ ನಡೆಯೋದು ಸಾಮಾನ್ಯ. ಜಗಳ ಮಾಡಿಕೊಂಡಿದ್ದಕ್ಕೆ ಕೆಲವರನ್ನು ಬಿಗ್‌ಬಾಸ್ ಮನೆಯಿಂದ ಹೊರ ಹಾಕಿರುವ ಉದಾಹರಣೆಗಳಿವೆ. ಇದೀಗ ಬಿಗ್‌ಬಾಸ್ ಕನ್ನಡ 12 ಶೋ ಮನೆಯಲ್ಲಿ ಗಿಲ್ಲಿ ನಟ ಹಾಗೂ ರಿಷಾ ಗೌಡ ನಡುವೆ ಗಲಾಟೆ ನಡೆದಿದೆ. ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದು, ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರನ್ನು ಎಲಿಮಿನೇಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಗಿಲ್ಲಿ ಅವರು ಬಾತ್ರೂಂನಲ್ಲಿ ಮನವಿ ಮಾಡಿದ್ದಾರೆ. ಆದರೆ, ರಿಷಾ ಇದಕ್ಕೆ ಬಗ್ಗಲಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೊರಟ ಗಿಲ್ಲಿ ಅವರು, ರಿಷಾ ಅವರ ಬಟ್ಟೆಯನ್ನು ತಂದು ಬಾತ್ರೂಂ ಹೊರ ಭಾಗದಲ್ಲಿರುವ ನೆಲದ ಮೇಲೆ ಹಾಕಿದ್ದಾರೆ. ಇದಕ್ಕೆ ಕೋಪಗೊಂಡ ರಿಷಾ ಮನೆಯಲ್ಲಿ ಕೂಗಾಡಿ, ಕಿರುಚಾಡಿ ಗದ್ದಲ ಸೃಷ್ಟಿಸಿದ್ದಾರೆ.
ಅಷ್ಟೇ ಅಲ್ಲದೆ ರಿಷಾ ಅವರು ಗಿಲ್ಲಿ ಮೇಲೆ ಕೂಗಾಡಿದ್ದಾರೆ. ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಿದಾಗ ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಈ ಬಾರಿಯೂ ಅದೇ ರೀತಿ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ತೆಲುಗು ಬಿಗ್ ಬಾಸ್ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಮಹಿಳಾ ಸ್ಪರ್ಧಿ ಮೇಲೆ ಪುರುಷ ಸ್ಪರ್ಧಿ ಕಠಿಣವಾಗಿ ನಡೆದುಕೊಂಡಿದ್ದ. ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ವೀಕೆಂಡ್ ಎಪಿಸೋಡ್ನಲ್ಲಿ ಅಕ್ಕಿನೇನಿ ನಾಗಾರರ್ಜುನ ಬರುತ್ತಿದ್ದಂತೆ ಆ ಸ್ಪರ್ಧಿಯನ್ನು ಹೊರಕ್ಕೆ ಕಳುಹಿಸಲಾಯಿತು. ಕನ್ನಡದಲ್ಲೂ ಇದೇ ರೀತಿ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇಲ್ಲವೇ, ಬಿಗ್ ಬಾಸ್ ಈ ಬಗ್ಗೆ ಯಾವ ರೀತಿಯ ಆದೇಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ – 20 ಮಂದಿ ದುರ್ಮರಣ!







