ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸ ದಿಢೀರ್ ರದ್ದು!

ಬೆಂಗಳೂರು : ಕಾಂಗ್ರೆಸ್​​​ನಲ್ಲಿ ನವೆಂಬರ್​ ಕ್ರಾಂತಿ ನಡೆಯಲಿದೆ ಅನ್ನೋ ಸುದ್ದಿ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದ್ದು, ಈ ಬೆನ್ನಲ್ಲೇ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿತ್ತು. ಹಾಗಾಗಿ ಸಾಹುಕಾರ್ ರಾಹುಲ್​​​ ಗಾಂಧಿ ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದರು. ಆದರೆ ಇದೀಗ ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸ ದಿಢೀರ್ ರದ್ದಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಬುಲಾವ್ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಲು ಪ್ಲ್ಯಾನ್ ಮಾಡಿದ್ದರು. 3 ದಿನಗಳ ಕಾಲ ದೆಹಲಿಯಲ್ಲೇ ಇರುವ ಬಗ್ಗೆ ಜಾರಕಿಹೊಳಿ ಹೇಳಿದ್ದರು. ಈಗ ಸಾಹುಕಾರ್ ದಿಢೀರ್ ಅಂತಾ ದೆಹಲಿ ಪ್ರವಾಸ ಕ್ಯಾನ್ಸಲ್ ಮಾಡಿದ್ದಾರೆ.

ಸಚಿವ ಸತೀಶ್ ದೆಹಲಿಗೆ ತೆರಳಿ ರಾಹುಲ್​​​ ಗಾಂಧಿ ಭೇಟಿ ಬಳಿಕ AICC ಅಧ್ಯಕ್ಷ ಮಲ್ಲಿಕಾರ್ಜುನ್​​​​​​​​​​​ ಅವರನ್ನೂ ಭೇಟಿಯಾಗಲು ತಯಾರಿ ನಡೆಸಿದ್ದರು. ಈ ವೇಳೆ ಜಾರಕಿಹೊಳಿಗೆ 5 ಮಂತ್ರಿಗಳು ಸಾಥ್​​ ಕೊಡಲಿದ್ದಾರೆ ಎನ್ನಲಾಗುತ್ತಿತ್ತು.

ಇದನ್ನೂ ಓದಿ : ಕೊನೆಗೂ ಕನಸು ನನಸು – ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ!

Btv Kannada
Author: Btv Kannada

Read More