ವಿಜಯನಗರ : ಶಾಸಕ- ಸಚಿವರ ಸಮನ್ವಯದ ಕೊರತೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಮತ್ತು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗವಿಯಪ್ಪ ನಡುವೆ ಶೀತಲ ಸಮರ ನಡೆಯುತ್ತಿದೆ.
ರಾಜ್ಯ ಸರ್ಕಾರದ ಅನುದಾನ ಸೇರಿದಂತೆ, KKRDB, DMF ಮತ್ತು KEMRCE ಹಣ ಕೋಟಿ, ಕೋಟಿ ಬಿದ್ದಿದೆ. ಆದ್ರೆ ಇಲ್ಲಿ ಅಭಿವೃದ್ಧಿಗೆ ಹಣ ಖರ್ಚು ಮಾಡಲು ಸಮನ್ವಯದ ಕೊರತೆಯಿದ್ದು, ಹಲವು ಕಾರ್ಯಕ್ರಮ, ಸಭೆಗಳಲ್ಲಿ ಸಚಿವ- ಶಾಸಕರು ಒಟ್ಟಿಗೆ ಕಾಣಿಸಿಕೊಳ್ಳಲ್ಲ.
ರಾಜ್ಯೋತ್ಸವ ಅದ್ದೂರಿಯಾದ್ರೂ, ಗ್ಯಾರಂಟಿ ಉತ್ಸವ ಮಾಡಿದ್ರೂ ಶಾಸಕ ಗವಿಯಪ್ಪ ಗೈರಾಗಿದ್ದರು. ಶಾಸಕ ಗವಿಯಪ್ಪ ಅಭಿವೃದ್ಧಿ ಕಾರ್ಯದ ಸಭೆಗಳಲ್ಲಿ ಭಾಗಿಯಾಗಲಿಲ್ಲ. ಸದ್ಯ ಕಾಂಗ್ರೆಸ್ ಮನೆಯಲ್ಲಿ ಸಚಿವ ಶಾಸಕರ ಮುಸುಕಿನ ಗುದ್ದಾಟ ಸದ್ದಿಲ್ಲದೇ ನಡಿತೀದೆ.
ಇದನ್ನೂ ಓದಿ : 45 ಸಿನಿಮಾದ ‘ಆಫ್ರೋ ಟಪಾಂಗ್’ ಸಾಂಗ್ ರಿಲೀಸ್ – ಭರ್ಜರಿ ಸ್ಟೆಪ್ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ. ಶೆಟ್ಟಿ!
Author: Btv Kannada
Post Views: 234







