ಬೆಂಗಳೂರು : ರಾಜ್ಯಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಈ ಮಧ್ಯೆ ಕನ್ನಡ ನಾಡಲ್ಲಿ ಕನ್ನಡ ಭಾಷೆಗೆ ಪ್ರತಿಷ್ಠಿತ ಸಂಸ್ಥೆಯಿಂದ ಅಪಮಾನವಾಗಿರುವ ಆರೋಪ ಕೇಳಿಬಂದಿದೆ.

ಕನ್ನಡದ ಅಸ್ಮಿತೆಯ ಬಣ್ಣಗಳನ್ನು ಫುಟ್ ಪಾತ್ಗೆ ಲೇಪಿಸಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕನ್ನಡಕ್ಕೆ ಅವಮಾನ ಮಾಡಿದೆ. IISC ಸಂಸ್ಥೆಯ ಆಡಳಿತ ಮಂಡಳಿ ಉದ್ದೇಶ ಪೂರ್ವಕವಾಗಿಯೇ ಫುಟ್ ಪಾತ್ಗೆ ಹಳದಿ & ಕೆಂಪು ಬಣ್ಣ ಬಳಿದಿದೆ. ಸಂಸ್ಥೆಯಲ್ಲಿರುವ ಕನ್ನಡ ಉದ್ಯೋಗಿಗಳ ಆಕ್ರೋಶದ ಹೊರತಾಗಿಯೂ ಈ ಬಣ್ಣ ಬಳಿದಿದ್ದಾರೆ.

IISC ಆಡಳಿತ ಕನ್ನಡ ರಾಜ್ಯೋತ್ಸವದ ಆಚರಣೆಗೂ ಅವಕಾಶ ನೀಡಿಲ್ಲ. ಪ್ರತಿ ಬಾರಿಯಂತೆ IISC ಈ ಬಾರಿಯೂ ಕನ್ನಡ ನೌಕರರಿಗೆ ನಿರಾಸೆ ಮೂಡಿಸಿದ್ದು, ದಿನನಿತ್ಯ ಹಳದಿ & ಕೆಂಪು ಬಣ್ಣ ಬಳಿದ ಫುಟ್ ಪಾತ್ ಮೇಲೆ ಉದ್ಯೋಗಿಗಳು ಓಡಾಡುತ್ತಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಅನ್ಯಭಾಷಿಗರೇ ಹೆಚ್ಚಾಗಿದ್ದು, ಇದೀಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. IISC ಆಡಳಿತ ಕೋಟಿ ಕೋಟಿ ಕನ್ನಡಿಗರ ಕ್ಷಮೆ ಕೇಳುವಂತೆ ಸಂಘಟನೆಗಳು ಆಗ್ರಹಿಸಿದೆ.
ಇದನ್ನೂ ಓದಿ : ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ – ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ!







