ಬಿಡುಗಡೆ ಹಂತದಲ್ಲಿರುವ ಸುಧೀರ್ ಅತ್ತಾವರ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಕೊರಗಜ್ಜ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯ ಈ ಚಿತ್ರದ ‘ಪ್ಯಾನ್ ಇಂಡಿಯಾ’ರಾಷ್ಟ್ರೀಯ ಮಟ್ಟದ ಸುದ್ದಿಗೋಷ್ಠಿ ಹಾಗೂ ಶ್ರೀ ಕೊರಗಜ್ಜ ದೈವದ ಅದ್ದೂರಿ ಕೋಲ ಸೇವೆ ನವೆಂಬರ್ 11ರಂದು ಮಂಗಳೂರಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಗಳಿಗೆ ದೆಹಲಿ, ಮುಂಬಾಯಿ, ಹೈದರಾಬಾದ್, ಕೊಚ್ಚಿ ಬೆಂಗಳೂರು, ಮಂಗಳೂರು ಹೀಗೆ ದೇಶದ ನಾನಾ ಭಾಗದ ಪ್ರತಿಷ್ಟಿತ ಮಾಧ್ಯಮ ಮಿತ್ರರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿ ರಾಷ್ಟ್ರೀಯ ಮಟ್ಟದ ಸುದ್ದಿಗೋಷ್ಠಿ ನಡೆಸಲಿದೆ.
ನಮ್ಮ ಚಿತ್ರದ ಆರಂಭದಿಂದಲೂ ಸುಧೀಂದ್ರ ವೆಂಕಟೇಶ್ ಅವರೆ ಪಿ.ಆರ್.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆ ಚಿತ್ರದ ಕುರಿತು ಎಲ್ಲಾ ಮಾಹಿತಿಗಳನ್ನು ಪತ್ರಿಕಾ, ಟಿವಿ ಹಾಗೂ ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳಿಗೆ ಕಳುಹಿಸುತ್ತಾರೆ. ನಮ್ಮ ಚಿತ್ರಕ್ಕೆ ಬೇರೆ ಪಿ.ಆರ್.ಓ ಇರುವುದಿಲ್ಲ. ಆದರೆ ಕಿಡಿಗೇಡಿಗಳು, ತಾವು ಪಿ ಆರ್ ಒ ಎಂದು ಹೇಳಿಕೊಳ್ಳುತ್ತಾ ತಪ್ಪು ಮಾಹಿತಿಗಳನ್ನು ಮಾಧ್ಯಮದವರಿಗೆ ಹಂಚುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಪಿ ಆರ್ ಒ ವೆಂಕಟೇಶ್ ಅಲ್ಲದೆ ಬೇರೆ ಯಾರ ಮಾಹಿತಿಗಳನ್ನು ಮಾಧ್ಯಮದವರು ಪರಿಗಣಿಸಬಾರದು ಎಂದು “ಕೊರಗಜ್ಜ” ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.
ಇದನ್ನೂ ಓದಿ : ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಅಣ್ಣಾವ್ರ ಚಿತ್ರಗಳಲ್ಲಿ ಬಳಸಿದ್ದ ಲೆನ್ಸ್ ಬಳಕೆ!







