ಮಹಿಳೆಗೆ ಕಿರುಕುಳ ಆರೋಪ – ಬೆಂಗಳೂರು ವಿವಿ ಪ್ರೊಫೆಸರ್​​ ಮೈಲಾರಪ್ಪ ಅರೆಸ್ಟ್!

ಬೆಂಗಳೂರು : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರಿನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಪ್ರೊ. ಬಿ.ಸಿ. ಮೈಲಾರಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರ ಠಾಣೆಯಲ್ಲಿ ಮಹಿಳೆ ನೀಡಿದ ದೂರು ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮೈಲಾರಪ್ಪನವರೊಂದಿಗೆ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು  ದೂರು ದಾಖಲಿಸಿದ್ದಾರೆಪರಿಚಯದ ಸಂದರ್ಭದಿಂದಲೇ ಅವರಿಂದ ಲೈಂಗಿಕ ಕಿರುಕುಳ ಆರಂಭವಾಗಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ2022ರಿಂದ 2024ರವರೆಗೆ ಈ ಕಿರುಕುಳ ಮುಂದುವರಿದಿದೆ. 

ಮಹಿಳೆಯು ಈ ವಿಷಯವನ್ನು ಮೊದಲು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ತಿಳಿಸಿದ್ದರುಅಲ್ಲಿ ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾಗಿತ್ತುಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಪ್ಪನವರು ಮಹಿಳೆಗೆ ಬೆದರಿಕೆ ನೀಡುತ್ತಿದ್ದಾರೆ ಎಂದು ಹೊಸ ದೂರು ನೀಡಲಾಗಿದೆ.

ದೂರಿನ ವಿವರಗಳ ಪ್ರಕಾರಮೈಲಾರಪ್ಪನವರು ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದಾರೆಇದಕ್ಕೆ ಒಪ್ಪದಿದ್ದರೆ ತೀವ್ರ ಪರಿಣಾಮಗಳು ಬರಲಿವೆ ಎಂದು ಬೆದರಿಸಿದ್ದಾರೆಈ ಬೆದರಿಕೆಯು ಮಹಿಳೆಯಲ್ಲಿ ಭಯ ಮೂಡಿಸಿದ್ದು, ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಪೊಲೀಸ್ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಮೈಲಾರಪ್ಪನವರನ್ನು ಬಂಧಿಸಿದ್ದಾರೆ. ಸದ್ಯ ಅವರನ್ನು ಠಾಣೆಯಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ. 

ಇದನ್ನೂ ಓದಿ : ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪ – ವಿಶ್ವ ಹಿಂದೂ ಪರಿಷತ್​ನ ಶರಣ್ ಪಂಪ್​​ವೆಲ್ ಅರೆಸ್ಟ್!

Btv Kannada
Author: Btv Kannada

Read More