ನೆಲಮಂಗಲ : ಮದುವೆಯಲ್ಲಿ ಊಟಕ್ಕೆ ಕುಳಿತ ವ್ಯಕ್ತಿಗಳನ್ನು ಏಳಿಸಿ ಅವಮಾನ ಮಾಡಿ ಕಳುಹಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ನಿಮಗೆ ಊಟ ಹಾಕೋದಿಲ್ಲ, ನೀವು ತಿಲಕ ಇಟ್ಟಿದ್ದೀರಿ ಎಂದು ಅವಮಾನ ಮಾಡಲಾಗಿದೆ. ನೆಲಮಂಗಲದ ಮುಸ್ಲಿಂ ಮದುವೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮದುವೆಗೆ ರಾಜು ಎಂಬುವವರನ್ನು ಆಹ್ವಾನಿಸಲಾಗಿತ್ತು. ಅ.26ರಂದು ನೆಲಮಂಗದಲ ಖಾಸಗಿ ಕಲ್ಯಾಣ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಜೋಡಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ವಧು ಸಾನಿಯಾ ಸಂಬಂಧಿ ರಾಜು ಎಂಬಾತನಿಗೆ ಮದುವೆಗೆ ಬರುವಂತೆ ತಿಳಿಸಿದ್ದ. ಆಹ್ವಾನ ನೀಡಿದ್ದ ಕಾರಣ ಕ್ಷೌರಿಕ ಕೆಲಸವನ್ನು ಬೇಗನೆ ಮುಗಿಸಿ ಶಾಪ್ ಕ್ಲೋಸ್ ಮಾಡಿದ ರಾಜು ಮದುವೆಗೆ ತೆರಳಿದ್ದರು. ಆದರೆ ಮದುವೆ ಕಾರ್ಯಕ್ರಮದಲ್ಲಿ ರಾಜು ತಿಲಕ ಇಟ್ಟಿದ್ದೀರಿ ಎಂದು ಊಟಕ್ಕೆ ಕುಳಿತಲ್ಲಿಂದ ಎಬ್ಬಿಸಿದ್ದಾರೆ.
ಇಸ್ಲಾಂಪುರದ ಸಮಿವುಲ್ಲಾ ಎಂಬಾತನ ಮಗನ ಮದುವೆಯಲ್ಲಿ ರಾಜು ತಿಲಕ ಇಟ್ಟುಕೊಂಡು ಊಟಕ್ಕೆ ಕುಳಿತಿದ್ದ. ಈ ವೇಳೆ ತಿಲಕ ಇಟ್ಟಿದ್ದನ್ನ ನೋಡಿ ನಿಮಗೆ ಊಟ ಹಾಕುವುದಿಲ್ಲ ನಿಮ್ಮನ್ನ ಯಾರು ಕರೆದಿದ್ದು ಎಂದು ಅವಮಾನ ಮಾಡಿದ್ದಾರೆ. ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ ಎಂದು ಸಮಿವುಲ್ಲಾ ಕಳುಹಿಸಿದ್ದಾನೆ.
ಇದನ್ನೂ ಓದಿ : ಇನ್ಸ್ಪೆಕ್ಟರ್ ಶ್ರೀನಿವಾಸ್ ವಿರುದ್ಧ ಕಿರುಕುಳ ಆರೋಪ – ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಇಬ್ಬರು ಸಾವು!







