ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಇಂದು ಬಿಗ್ ಡೇ ಆಗಿದೆ. ಡಿ ಗ್ಯಾಂಗ್ಗೆ ಕೊಲೆ ಕೇಸ್ನ ಅಸಲಿ ಸಂಕಷ್ಟ ಈಗ ಶುರುವಾಗ್ತಿದೆ. ಇಂದು ಕೋರ್ಟ್ನಲ್ಲಿ ಕೊಲೆ ಕೇಸ್ ಸಂಬಂಧ ವಿಚಾರಣೆ ನಡೆಯಲಿದ್ದು, ಕೊಲೆ ಪ್ರಕರಣದ ಆರೋಪಿಗಳ ಮೇಲೆ ದೋಷಾರೋಪ ನಿಗದಿಯಾಗಲಿದೆ.
ಸಿಸಿಎಚ್ 64ನೇ ಕೋರ್ಟ್ನಲ್ಲಿ ಇಂದು ನಟ ದರ್ಶನ್ ಸೇರಿ 17 ಆರೋಪಿಗಳ ಮೇಲೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತದೆ. 17 ಆರೋಪಿಗಳ ಮೇಲೆ ದಾಖಲಾಗಿರುವ ಸೆಕ್ಷನ್ಗಳ ಅನ್ವಯ ಆರೋಪ ನಿಗದಿಯಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದ ಟೆಕ್ನಿಕಲ್ ಎವಿಡೆನ್ಸ್ ಮೇಲೆ ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ. ಇಂದು ವಿಚಾರಣೆಗೆ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ ಆರೋಪಿಗಳು ಕಡ್ಡಾಯ ಹಾಜರಿರಬೇಕು. ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿಗಳನ್ನು ಹಾಜರುಪಡಿಸಲು ಕೋರ್ಟ್ ಸೂಚನೆ ನೀಡಿದ್ದು, ಎಲ್ಲಾ ಆರೋಪಿಗಳ ಹಾಜರಾತಿ ಪಡೆದ ಬಳಿಕ ಚಾರ್ಜಸ್ ಫ್ರೇಮ್ ಪ್ರಕ್ರಿಯೆ ಶುರುವಾಗಲಿದೆ. ನ್ಯಾಯಾಧೀಶರು 17 ಆರೋಪಿಗಳ ಬಗ್ಗೆ ದಾಖಲಾಗಿರುವ ಸೆಕ್ಷನ್ ಬಗ್ಗೆ ಹೇಳಲಿದ್ದು, ಚಾರ್ಜ್ಶೀಟ್ ನಿಗದಿ ಬಳಿಕ ಟ್ರಯಲ್ಗೆ ದಿನಾಂಕ ನೀಡಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಮೂವರು ಐವಿಟ್ನೆಸ್ಗಳೇ ಪ್ರಮುಖ ಸಾಕ್ಷ್ಯವಾಗಿದ್ದು, ಇದೀಗ ಮೂರು ಜನ ಐವಿಟ್ನೆಸ್ಗಳಿಂದ ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ. ಐವಿಟ್ನೆಸ್ಗಳು ಕೋರ್ಟ್ನಲ್ಲಿ ಕೊಡುವ ಹೇಳಿಕೆಯೇ ಮಹತ್ವದ್ದಾಗಿದೆ. ಇನ್ನು ದರ್ಶನ್ & ಗ್ಯಾಂಗ್ಗೆ ಡಿಎನ್ಎ ಮ್ಯಾಚಿಂಗ್ ಕಬ್ಬಿಣದ ಕಡಲೆಯಾಗಿದ್ದು, DNA ರಿಪೋರ್ಟ್ ಆರೋಪಿಗಳಿಗೆ ದೊಡ್ಡ ಮಟ್ಟದ ಸಂಕಷ್ಟ ತಂದಿದೆ.
ಆರೋಪಿಗಳ ಮೈಮೇಲೆ ರೇಣುಕಾಸ್ವಾಮಿ ರಕ್ತ ಕಲೆಗಳು ಪತ್ತೆಯಾಗಿದ್ದು, ಕೃತ್ಯ ನಡೆದ ದಿನದಂದು ಧರಿಸಿದ ಬಟ್ಟೆ ಸಂಗ್ರಹಿಸಿ ಪೊಲೀಸರು FSL ಕಳುಹಿಸಿದ್ದರು. ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳ ಇರುವ ಬಗ್ಗೆ DNA ರಿಪೋರ್ಟ್ ಬಂದಿತ್ತು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸುಮಾರು 230ಕ್ಕೂ ಹೆಚ್ಚು ಸಾಕ್ಷ್ಯಗಳ ಉಲ್ಲೇಖವಾಗಿದೆ. ಕೋರ್ಟ್ ಟ್ರಯಲ್ಗೆ ಪ್ರಾಸಿಕ್ಯೂಷನ್ 76 ಪ್ರಮುಖ ಸಾಕ್ಷ್ಯಗಳನ್ನ ಪಟ್ಟಿ ಮಾಡಿದ್ದು, ಸದ್ಯ ನಟ ದರ್ಶನ್, ಪವಿತ್ರಗೌಡ ಸೇರಿ 17 ಆರೋಪಿಗಳಿಗೆ ಮಹಾ ಸಂಕಷ್ಟ ಶುರುವಾಗಿದೆ.
ಇದನ್ನೂ ಓದಿ : ದರ್ಪ ಮೆರೆದ ವಿಜುಗೌಡ ಪಾಟೀಲ ಪುತ್ರ: ಟೋಲ್ ಸಿಬ್ಬಂದಿ ಮೇಲೆ ಸಮರ್ಥ್ ಗೌಡನ ಗ್ಯಾಂಗ್‌ನಿಂದ ಹಲ್ಲೆ!







