ಬೆಂಗಳೂರು : ಖತರ್ನಾಕ್ ಕಳ್ಳರು ಜಾತಿಗಣತಿಗೆ ಬಂದಿದ್ದ ಟೀಚರಮ್ಮನ ಚೈನ್ ಎಗರಿಸಿರುವ ಘಟನೆ ಬ್ಯಾಡರಹಳ್ಳಿಯ ಭರತ್ ನಗರದಲ್ಲಿ ನಡೆದಿದೆ. ಟೀಚರ್ ಮನೆ ಗೇಟಿನ ಮುಂದೆ ನಿಂತು ವಿಚಾರಿಸ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ಅವರ ಚೈನ್ ಕಿತ್ತು ಎಸ್ಕೇಪ್ ಆಗಿದ್ದಾರೆ.

ಸರಗಳ್ಳರಿಬ್ಬರೂ ಹೆಲ್ಮೆಟ್ ಧರಿಸಿ ಅದೇ ದಾರಿಯಲ್ಲಿ ಬಂದಿದ್ದರು. ಟೀಚರಮ್ಮ ಬೇರೆಡೆ ಮಾತಾಡ್ತಿರೋದನ್ನ ಗಮನಿಸಿ ಹಿಂಬದಿ ಕೂತಿದ್ದ ಸರಗಳ್ಳ ಮೆಲ್ಲಗೆ ಬೈಕ್ನಿಂದ ಇಳಿದು ಟೀಚರಮ್ಮನ ಬಳಿ ಬಂದಿದ್ದ. ನೋಡನೋಡುತ್ತಿದ್ದಂತೆಯೇ ಕಳ್ಳ ಟೀಚರಮ್ಮನ ಸರ ಎಗರಿಸಿದ್ದಾನೆ. ಸರಗಳ್ಳರ ಕೃತ್ಯದ exclusive ಸಿಸಿಟಿವಿ ದೃಶ್ಯ BTV ಬಳಿಯಿದೆ.

ಈ ಘಟನೆ ಸಂಬಂಧ ಇದೀಗ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಗಳ್ಳರು ಈ ಕೃತ್ಯಕ್ಕೂ ಮುನ್ನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಸರ ಎಗರಿಸಿದ್ದರು.
ಇದನ್ನೂ ಓದಿ : ಡೆಲಿವರಿ ಸ್ಕ್ಯಾಮ್‌ಗೆ ಬಲಿಯಾದ ಸಾಫ್ಟ್‌ವೇರ್ ಇಂಜಿನಿಯರ್ – 1.85 ಲಕ್ಷದ ಮೊಬೈಲ್ ಬಾಕ್ಸಲ್ಲಿ ಟೈಲ್ಸ್ ಪೀಸ್ ಇಟ್ಟು ವಂಚನೆ!
Author: Btv Kannada
Post Views: 471







