ಡೆಲಿವರಿ ಸ್ಕ್ಯಾಮ್‌ಗೆ ಬಲಿಯಾದ ಸಾಫ್ಟ್‌ವೇರ್ ಇಂಜಿನಿಯರ್ – 1.85 ಲಕ್ಷದ ಮೊಬೈಲ್ ಬಾಕ್ಸಲ್ಲಿ ಟೈಲ್ಸ್‌ ಪೀಸ್‌ ಇಟ್ಟು ವಂಚನೆ!

ಬೆಂಗಳೂರು : ಆನ್‌ಲೈನ್​ನಲ್ಲಿ 1.85 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಆರ್ಡರ್ ಮಾಡಿದ್ದ ಸಾಫ್ಟ್‌ವೇರ್ ಇಂಜಿನಿಯರ್​ಗೆ ಬಾಕ್ಸ್‌ನಲ್ಲಿ ಕಲ್ಲಿಟ್ಟು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ನಿವಾಸಿಯಾದ ಪ್ರೇಮಾನಂದ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಅವರು ಅಮೆಜಾನ್ ಆ್ಯಪ್ ಮೂಲಕ ಬರೋಬ್ಬರಿ 1 ಲಕ್ಷ 85 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ (Samsung Z Fold) ಮೊಬೈಲ್ ಅನ್ನು ಆರ್ಡರ್ ಮಾಡಿದ್ದರು. ನಿಗದಿತ ದಿನಾಂಕದಂದೇ ಆರ್ಡರ್ ಡೆಲಿವರಿಯಾಗಿದೆ. ಬಾಕ್ಸ್ ಓಪನ್ ಮಾಡಿದಾಗ ಟೆಕ್ಕಿ ಪ್ರೇಮಾನಂದ್ ಶಾಕ್ ಆಗಿದ್ದಾರೆ. ಮೊಬೈಲ್‌ ಬಾಕ್ಸ್‌ನಲ್ಲಿ ಒಂದು ಚೌಕಾಕಾರದ ಕಲ್ಲನ್ನು ಇಟ್ಟು ವಂಚಿಸಿದ್ದಾರೆ.

1.85 ಲಕ್ಷ ರೂ. ಮೌಲ್ಯದ ಹೊಸ ಮೊಬೈಲ್ ಬದಲಿಗೆ, ಬಾಕ್ಸ್‌ನಲ್ಲಿ ಮೊಬೈಲ್‌ನಷ್ಟೇ ತೂಕವಿರುವ ಒಂದು ಚೌಕಾಕಾರದ ಕಲ್ಲು ಇತ್ತು. ವಂಚಕರು ಮೊಬೈಲ್ ತೆಗೆದು ಅದೇ ತೂಕದ ಕಲ್ಲನ್ನು ಬಾಕ್ಸ್‌ನಲ್ಲಿಟ್ಟು ವಂಚನೆ ಮಾಡಿದ್ದಾರೆ. ಪ್ರೇಮಾನಂದ್ ಅವರು ಆರ್ಡರ್‌ಗಾಗಿ ಈಗಾಗಲೇ ಸಂಪೂರ್ಣ ಹಣವನ್ನು ಪಾವತಿಸಿದ್ದರು. ತಕ್ಷಣವೇ ಡೆಲಿವರಿ ಬಾಯ್‌ಗೆ ಕರೆ ಮಾಡಿದಾಗ ಆತ ಯಾವುದೇ ರೆಸ್ಪಾನ್ಸ್​ ಮಾಡಿಲ್ಲ.

ವಂಚನೆಗೆ ಒಳಗಾದ ಪ್ರೇಮಾನಂದ್ ಅವರು ಕೊನೆಗೆ ಈ ಬಗ್ಗೆ ಎನ್‌ಸಿಆರ್‌ಪಿ (NCRP) ಪೋರ್ಟಲ್‌ನಲ್ಲಿ ದೂರು ಸಲ್ಲಿಸಿದ್ದಾರೆ. ಇದರ ಜೊತೆಗೆ, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿಯೂ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : ಸುಕೇಶ್ ಶೆಟ್ಟಿ ನಿರ್ದೇಶನದ ‘ಪೀಟರ್’ ಟೀಸರ್ ರಿಲೀಸ್ – ಹೊಸ ಅವತಾರದಲ್ಲಿ ರಾಜೇಶ್ ಧ್ರುವ!

Btv Kannada
Author: Btv Kannada

Read More