ನಿರ್ದೇಶಕ ಪುನೀತ್ ಅರಸೀಕೆರೆ ಇದೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ಪ್ರಾರಂಭಿಸಿದ್ದಾರೆ. ಮಿಸ್ಟ್ರಿ ಥ್ರಿಲ್ಲರ್ ಕಥಾಹಂದರ ಒಳಗೊಂಡ ಆ ಚಿತ್ರದ ಹೆಸರು ಜಾನ್. ಯುವ ಪವರ್ ಪಿಚ್ಚರ್ ಬ್ಯಾನರ್ನ ಎರಡನೇ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಜಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದು ಮಗು, ಲೇಡಿ ಪೊಲೀಸ್ ಅಧಿಕಾರಿ, ಒಬ್ಬ ಸೈಕೋ ಇಟ್ಟುಕೊಂಡು ನಿರ್ದೇಶಕ ಪುನೀತ್ ಅವರು ಒಂದು ಮಿಸ್ಸಿಂಗ್ ಕೇಸ್ ಕಥೆಯನ್ನು ಹೇಳಹೊರಟಿದ್ದಾರೆಂಬುದು ಇದರಲ್ಲಿ ಕಾಣುತ್ತದೆ.

ಪುನೀತ್ ಅವರ ಮೊದಲ ಚಿತ್ರ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರೀಕರಣ ಮುಗಿದಿದ್ದು, ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ತೆರೆಕಾಣಿಸುವ ಪ್ರಯತ್ನ ನಡೀತಿದೆ. ಈ ನಡುವೆಯೇ ಯುವ ಪವರ್ ಪಿಚ್ಚರ್ ಬ್ಯಾನರ್ ಅಡಿಯಲ್ಲಿ ಜಾನ್ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಾಗಿದೆ.

ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಸೌಜನ್ಯ ಧರ್ಮ ಪ್ರಣಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಅವರ ಸಂಭಾಷಣೆ ಈ ಚಿತ್ರಕ್ಕಿರಲಿದೆ.

ಇದನ್ನೂ ಓದಿ : ಅಭಿಮಾನದ ಹೆಸರಲ್ಲಿ ಧ್ರುವ ಸರ್ಜಾ ಫ್ಯಾನ್ಸ್ಗಳಿಂದ ಸ್ಥಳೀಯರಿಗೆ ಕಾಟ – ಆ್ಯಕ್ಷನ್ ಪ್ರಿನ್ಸ್ ವಿರುದ್ಧ ದೂರು ದಾಖಲು!







