ಬೆಂಗಳೂರು : ಖತರ್ನಾಕ್ ಯುವತಿಯೊಬ್ಬಳು ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದಾಳೆ. ಮಗಳಂತೆ ನೋಡಿಕೊಂಡವರ ಮನೆಯವ್ರಿಗೆ ಗುನ್ನ ಇಟ್ಟಿದ್ದು, ಮನೆಗೆಲಸದಾಕೆಗೆ ಕೋಟಿ ಕೋಟಿ ಬೆಲೆಯ ಆಸ್ತಿ ಬರೆದಿದ್ಳು. ಆದ್ರೆ ಆನ್ ಲೈನ್ ಬೆಟ್ಟಿಂಗ್ ಹುಚ್ಚಿಗೆ ಚಿನ್ನ ಕದ್ದು ಇದೀಗ ಯುವತಿ ಬೀದಿಗೆ ಬಂದಿದ್ದಾಳೆ. ಕೆಲಸ ಮಾಡ್ತಿದ್ದ ಮನೆಯಲ್ಲಿಯೇ ಕೇರ್ ಟೇಕರ್ ಯುವತಿ ಚಿನ್ನ ಕದ್ದಿದ್ದು, ಜೆಪಿ ನಗರ ಪೊಲೀಸರು ಆರೋಪಿ ಮಂಗಳಾಳನ್ನು ಬಂಧಿಸಿದ್ದಾರೆ.
ಮಂಗಳಾ 15 ವರ್ಷದ ಹಿಂದೆ ಆಶಾ ಜಾಧವ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಪ್ರತಿಷ್ಠಿತ ಜೆಪಿ ನಗರದಲ್ಲಿ ಕೋಟಿ ಕೋಟಿ ಬೆಲೆಯ ಆಸ್ತಿ ಆಶಾ ಜಾಧವ್ಗೆ ಇದೆ. ವೃದ್ಧೆ 5 ಕೋಟಿ ಮೌಲ್ಯದ ಮನೆಯನ್ನು ಮಂಗಳಾ ಹೆಸರಿಗೆ ವಿಲ್ ಮಾಡಿದ್ದರು. ಮಂಗಳಾ ಬಾಯ್ ಫ್ರೆಂಡ್ಸ್, ಆನ್ ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದಳು. ಈಕೆ ಮಾಡಿಕೊಂಡಿದ್ದ 40 ಲಕ್ಷ ಸಾಲವನ್ನೂ ಆಶಾ ಜಾಧವ್ ತೀರಿಸಿದ್ದರು. ಅಲ್ಲದೇ ಒಂದೂವರೆ ಕೋಟಿಯ ಮನೆಯನ್ನು ಮಂಗಳ ಹೆಸರಿಗೆ ಬರೆದಿದ್ದಳು.
ಆದ್ರೆ ಆನ್ ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದ ಯುವತಿ ಮನೆಯಲ್ಲಿ ಇದ್ದ ಚಿನ್ನ ಕದ್ದಿದ್ದಳು. ಒರಿಜಿನಲ್ ಕೀ ಬಳಸಿ ಮಂಗಳ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಳು. ಬಳಿಕ ಕೀ ಗೊತ್ತಿಲ್ಲದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ಲು. ಆಶಾ ಜಾಧವ್ ಕೀ ಎಲ್ಲೋ ಕಳೆದುಹೋಗಿದೆ ಎಂದು ಕೆಲ ದಿನ ಸುಮ್ಮನಿದ್ದಳು. ದೀಪಾವಳಿ ಹಬ್ಬಕ್ಕೆ ಚಿನ್ನ ಹಾಕಿಕೊಳ್ಳಲು ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದಿದ್ದಳು. ಈ ವೇಳೆ ಚಿನ್ನ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ.
ಇದೀಗ ಮಂಗಳಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಆಕೆ ಕದ್ದಿದ್ದ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಮಂಗಳಾ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದು, ಜೆಪಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : DDLR ಕಚೇರಿಯ LIVE ಲಂಚದ ಹಸಿ ಹಸಿ ಸ್ಟೋರಿ – ಬಡ ರೈತರಿಂದ ಲಕ್ಷಾಂತರ ಸುಲಿಗೆ.. ಬೆಂಗಳೂರು ಗ್ರಾ. DDLR ಕುಸುಮಲತಾ ಸಸ್ಪೆಂಡ್ಗೆ ಆಗ್ರಹ!







