ರೋಡ್ ರೇಜ್ ರೀತಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ – ಕಾರ್ ಮಿರರ್​​ಗೆ ಟಚ್ ಆಗಿದ್ದಕ್ಕೆ ಹಿಂಬಾಲಿಸಿಕೊಂಡು ಬಂದು ಹತ್ಯೆ!

ಬೆಂಗಳೂರು : ರೋಡ್ ರೇಜ್ ರೀತಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ್ಯಕ್ಸಿಡೆಂಟ್ ರೀತಿಯಲ್ಲಿ ಬಿಂಬಿಸಿ ಕೊಲೆ ನಡೆದಿದ್ದು, ಕಾರ್ ಮಿರರ್​​ಗೆ ಟಚ್ ಆಗಿದ್ದಕ್ಕೆ ಕಿಡಿಗೇಡಿಗಳು ಬರೋಬ್ಬರಿ 2 ಕಿಮೀ. ಚೇಸ್ ಮಾಡಿಕೊಂಡು ಬಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ.

ದರ್ಶನ್ ಕೊಲೆಯಾದ ಯುವಕ
     ದರ್ಶನ್ ಕೊಲೆಯಾದ ಯುವಕ

ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಕ್ಟೋಬರ್ 25ರಂದು ನಡೆದಿದ್ದ ಈ ಗಲಾಟೆಯಲ್ಲಿ ಬೈಕ್​ ಸವಾರ ದರ್ಶನ್ ಸಾವನ್ನಪ್ಪಿದ್ದು, ವರುಣ್​ಗೆ ಗಂಭೀರ ಗಾಯವಾಗಿದೆ. ಈ ಪ್ರಕರಣದ ಆರೋಪಿಗಳಾದ ಮನೋಜ್ ಕುಮಾರ್ & ಆರತಿ ಶರ್ಮಾನನ್ನು ಪೊಲೀಸರು  ಬಂಧಿಸಿದ್ದಾರೆ.

ವರುಣ್ ಗಾಯಾಳು
               ವರುಣ್ ಗಾಯಾಳು

ಈ ಸಂಬಂಧ ಜೆಪಿ ನಗರ ಸಂಚಾರ ಠಾಣೆಯಲ್ಲಿ ಅಪಘಾತ ಎಂದು ಕೇಸ್ ದಾಖಲಾಗಿತ್ತು. ಪೊಲೀಸರ ತನಿಖೆ ವೇಳೆ ಕೊಲೆ ಎಂದು ಪತ್ತೆಯಾಗಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ನಟ ದರ್ಶನ್​ಗೆ ಮತ್ತೆ ಬಿಗ್ ಶಾಕ್ – ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ನಿರಾಕರಿಸಿ ಕೋರ್ಟ್ ಆದೇಶ!

Btv Kannada
Author: Btv Kannada

Read More