ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಸಾವಿನಲ್ಲೂ ದಂಪತಿಯೊಬ್ಬರು ಒಂದಾಗಿದ್ದಾರೆ. ಒಂದೇ ದಿನ ಗಂಡ – ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ KR ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ.
ನಿಂಗರಾಜ ನಾಯ್ಕ್ (65), ಗೌರಮ್ಮ(50) ಮೃತ ದಂಪತಿ. ಗೌರಮ್ಮ ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದು, ಹೆಂಡತಿಯ ಅಂತ್ಯಸಂಸ್ಕಾರ ಸಿದ್ಧತೆ ಮಾಡ್ತಿದ್ದಾಗ ಪತಿಗೆ ಹೃದಯಾಘಾತ ಸಂಭವಿಸಿದೆ.
46 ವರ್ಷ ದಾಂಪತ್ಯ ನಡೆಸಿ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಒಂದೇ ದಿನ ತಂದೆ-ತಾಯಿ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿದ್ದಾರೆ.
ಇದನ್ನೂ ಓದಿ : PDO ಕಿರುಕುಳಕ್ಕೆ ಬೇಸತ್ತು ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ?
Author: Btv Kannada
Post Views: 268







