ನೆಲಮಂಗಲ: ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸಲೀಂ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ನೆಲಮಂಗಲದಲ್ಲಿ ಮತ್ತೆ ‘ಎಲೆಕ್ಷನ್’ ವಾರ್ ಶುರುವಾಯ್ತಾ ಎಂಬ ಪ್ರಶ್ನೆಗೆ ಈ ಘಟನೆ ಕಾರಣವಾಗಿದೆ. ಸಲೀಂ ಅವರು ತಮ್ಮ ಮನೆ ಮುಂದೆ ಮಾತನಾಡುತ್ತಿದ್ದಾಗ ಅಪರಿಚಿತರು ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡು ಸಲೀಂ ಅವರ ಕೈಗೆ ತಗುಲಿದ್ದು, ಅವರನ್ನು ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆ ಮುಂದೆ ಸಾವಿರಾರು ಜನರು ಜಮಾಯಿಸಿದ್ದು, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯತಿ ಸದಸ್ಯ ಸಲೀಂ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ರೌಡಿಶೀಟರ್ ಮುಬಾರಕ್ ಎಂಬಾತನ ಪಾತ್ರ ಇರುವುದು ಪೊಲೀಸರಿಗೆ ತಿಳಿದುಬಂದಿದೆ.

ಮುಬಾರಕ್ ಮತ್ತು ಆತನ ಗ್ಯಾಂಗ್ ಪತ್ತೆಗಾಗಿ ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಲೀಂ ಅವರು ರಾತ್ರಿ ನಮಾಜ್ ಮುಗಿಸಿ ಮನೆಗೆ ತೆರಳುವಾಗ ಮುಬಾರಕ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾನೆ.

ಪೊಲೀಸರು ಸ್ಥಳ ಮಹಜರ್ ಮಾಡಿ ಸಿಸಿ ಕ್ಯಾಮರಾ ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ರಾಮನಗರ ಕಾರ್ಪೊರೇಟರ್ ಕೊಲೆ ಆರೋಪಿಯಾಗಿದ್ದ ಮುಬಾರಕ್, ಜೈಲಿನಿಂದ ಪೆರೋಲ್ ಮೇಲೆ ಹೊರಬಂದ ನಂತರ ಈ ಕೃತ್ಯ ಎಸಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಘಟನೆಯ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ಬಘೀರ’ ಬಳಿಕ ‘ಪರಾಕ್’ ಅಖಾಡದಲ್ಲಿ ಶ್ರೀಮುರಳಿ ಬ್ಯುಸಿ.. ಬಿಗ್ ಬಜೆಟ್ ಸಿನಿಮಾಗೆ ಫೇಮಸ್ ಸ್ಟಂಟ್ ಮಾಸ್ಟರ್ ‘ರವಿವರ್ಮ’ ಎಂಟ್ರಿ!







